ಸಿನಿಮಾ ತೆರೆಯಲ್ಲಿ ಮಿಂಚುತಿರುವ ಕೊಡಗಿನ ಯುವ ನಟ ಸಂತೋಷ್ ಮೇದಪ್ಪ

Posted on: March 26, 2018

Rajaveera
ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ ಬದ್ದತೆಒಂದಿರುವ ಕೊಡಗಿನ ಯುವ ನಟ ಸಂತೋಷ್ ತಮ್ಮಯ್ಯ.

ಚಲನ ಚಿತ್ರರಂಗದಲ್ಲಿಕೊಡಗಿನ ಕಲಾವಿದರಿಗೇನು ಕಮ್ಮಿಇಲ್ಲವೇ ಇಲ್ಲಯುವಕ,ಯುವತಿಯರು ಚಲಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಲು ಹೊರಟಿದ್ದಾರೆ.ಅದರಲ್ಲಿ ಬೇರಂಬಾಣೆಯ ಬಿ.ಬಾಡಗಗ್ರಾಮದ ದಿ. ಚೆಡಿಯಂಡ ಎ. ನಾಣಯ್ಯ ಹಾಗು ತಾರಾ ನಾಣಯ್ಯನವರ ಪುತ್ರ ಚೆಡಿಯಂಡ ಸಂತೋಷ್ ಮೇದಪ್ಪ.IMG_20160324_200628

ಸಿದ್ದಾಪುರ ಹೈಸ್ಕೂಲ್ ನಂತರದಲ್ಲಿ ಬಾಳೆಲೆಯ ವಿಜಯ ಲಕ್ಷ್ಮಿ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ಸಂತೋಷ್‍ನಿಗೆ ವ್ಯಾಸಂಗದ ಸಮಯದಲ್ಲಿ ಡ್ರಾಮಾ ಹಾಗು ಡ್ಯಾನ್ಸ್ ನಲ್ಲಿ ಹೆಚ್ಚಿನ ಆಸಕ್ತಿಇತ್ತು.

ಬೆಂಗಳೂರಿಗೆ ಬಂದವನಿಗೆ ರಂಗಭೂಮಿ ಪರಿಚಯವಾಗಿರಾಜಗುರು ಹೊಸಕೋಟೆಯವರ ಸಾತ್ವಿಕ ರಂಗಪಯಣ ಡ್ರಾಮಾ ತಂಡದಲ್ಲಿ ಸೇರಿ ಚಿತ್ರರಂಗ,ರಂಗಭೂಮಿ,ನಟನೆಯ ನವರಸಗಳನ್ನು ಕರಗತ ಮಾಡತೊಡಗಿದ.ನಂತರದಲ್ಲಿ ಕೊಡಗಿನ ಹಿರಿಯ ರಂಗಭೂಮಿ ಕಲಾವಿದರಾದ ಸ್ರಷ್ಠಿಕೊಡಗುರಂಗದಲ್ಲಿ ಬದ್‍ಕ್ ಎಂಬ ಕೊಡವನಾಟಕವನ್ನು ದೆಹಲಿಯಲ್ಲಿ ಪ್ರದರ್ಶಿಸಿದ.

ಖ್ಯಾತ ನಿರ್ದೇಶಕ ಎ.ಟಿ.ರಘುರವರು ನಿರ್ದೇಶನದ ಜಮ್ಮಭೂಮಿ,ನಂಗಕೊಡವ ಕೊಡವ ದಾರವಾಹಿಯ ಮೂಲಕ ಮೊಟ್ಟಮೊದಲಬಾರಿಗೆ ಕ್ಯಾಮರಾದ ಮುಂದೆ ನಟಿಸಿದ. ತನ್ನ ನಟನೆ ಮತ್ತಷ್ಟು ಪಕ್ವವಾಗುತಿದ್ದಂತೆ ಗೋಪಿಪೀಣ್ಯಾರವರ ನಿರ್ಧೇಶನದ ನಂಗಕೊಡವ,ತೆಳಂಗ್ ನೀರ್ ಚಲನ ಚಿತ್ರದಲ್ಲಿ ಹಿರೋನ ತಂಗಿಯ ಗಂಡನಾಗಿ ನಟಿಸಿದ,ಓಂಪ್ರಕಾಶ್ ನಿರ್ದೇಶನದಲ್ಲಿ ಹನ್ನ್‍ಸು ಎಂಬ ಲಂಬಾಣಿ ಚಲನ ಚಿತ್ರದಲ್ಲಿಲೀಡ್ ಕ್ಯಾರೇಕ್ಟರ್ ನಟಿಸಿದ್ದು ಈ ಚgಲನ ಚಿತ್ರಕ್ಕೆ ಪ್ರಶಸ್ತಿ ಕೂಡ ಬಂದಿರುತದೆ.IMG_3889 (1)

ಸತ್ಯನಾರಾಯನ ಮನೆ ಎಂಬ ನಿರ್ದೇಶಕ ಹಾಗು ನಿರ್ಮಾಣದ ರಾಜವೀರ ಚಲನ ಚಿತ್ರದಲ್ಲಿ ನೆಗೆಟಿವ್ ರೋಲ್ ಶೂಟಿಂಗ್ ಮಾಡಲಾಗಿದೆ.
ಸಂತೋಷ್ ತಾನೇ ಸ್ಥಾಪಿಸಿದ ಐನ್‍ಮನೆ ಪೌಂಡೇಶನ್ನಲ್ಲಿ ತನ್ನ ತಂಡದೊದಿಗೆ ಪಲ್ಲಟವೆಂಬ ಕನ್ನಡ ಸಾಮಾಜಿಕ ನಾಟಕದ ಮೂಲಕ ಹಿಂದೂಳಿದವರ್ಗದ ಜೀತಪದ್ಧತಿಯ ನಿರ್ಮೂಲನೆಯ ಬಗ್ಗೆಗಿನ ಜಾಗ್ರತಿ ನಡೆಯುತಿದೆಂನ್ನುವನು. ಮುಂದೆ ಹಲವು ಚಲನ ಚಿತ್ರಗಳಲ್ಲಿ ನಡಿಸಲು ಅವಕಾಶ ಬರುತಿರುದ್ದು ಯಾವುದೇ ಪಾತ್ರಕ್ಕೂ ಸೈ ಎನ್ನುತ್ತಾನೆ ಯುವ ನಟ ಸಂತೋಷ್ ಮೇದಪ್ಪ._MG_0581 (1)

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *