ಅತ್ಯಾಚಾರ ಪ್ರಕರಣ ಮುಸ್ಲಿಂ ಸಮಾಜ ಖಂಡನೆ

Posted on: April 17, 2018

justies

ಮಡಿಕೇರಿ : ಜಮ್ಮುವಿನ ಕಥುವಾ ಎಂಬಲ್ಲಿ ಎಂಟರ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲಗೈದ ಘಟನೆಯನ್ನು ಹಾಗೂ ಉತ್ತರಪ್ರದೇಶದ ಉನ್ನಾವೋ ಎಂಬಲ್ಲಿನ ಅತ್ಯಾಚಾರ ಘಟನೆಯನ್ನು ಕೊಡಗು ಮುಸ್ಲಿಂ ಸಮಾಜ ತೀವೃವಾಗಿ ಖಂಡಿಸುತ್ತದೆ.

ಆಮ್ಮುವಿನಲ್ಲಿ ಎಂಟರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವವರಲ್ಲಿ ಪೊಲೀಸ್ ಅಧಿಕಾರಿ ಹಾಗೂ ನಿವೃತ್ತ ಸರಕಾರಿ ಅಧಿಕಾರಿ ಶಾಮೀಲಾಗುವ ಮೂಲಕ ಇಡೀ ದೇಶದ ಮಾನ ಹರಾಜು ಮಾಡಲಾಗಿದೆ. ಅಲ್ಲದೆ ಆರೋಪಿಗಳ ಪರವಾಗಿ ಸರಕಾರದ ಸಚಿವರುಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಅತ್ಯಾಚಾರಿಗಳಿಗೆ ಬೆಂಬಲ ಸೂಚಿಸಿದ್ದು, ಜೊತೆಗೆ ಸಂತ್ರಸ್ತರ ಪರವಾಗಿ ವಾದ ಮಾಡುವ ವಕೀಲರಿಗೆ ಬೆದರಿಕೆ ಒಡ್ಡುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟಿದ್ದಾರೆ.

ಉತ್ತರಪ್ರದೇಶದ ಶಾಸಕನೇ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರುವ ಮೂಲಕ ದೇಶ ಪ್ರೇಮಿಗಳ ನಿಜ ಬಣ್ಣವನ್ನು ಜಗತ್ತಿನ ಮುಂದೆ ಬಹಿರಂಗಗೊಳಿಸಿದ್ದಾರೆ. ಈ ಎರಡೂ ಘಟನೆಗಳ ಆರೋಪಿಗಳ ಮೇಲೆ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಕೊಡಗು ಮುಸ್ಲಿಂ ಸಮಾಜದ ಅಧ್ಯಕ್ಷ ಇಬ್ರಾಹೀಂ ಮಾಸ್ಟರ್, ಕಾರ್ಯಾಧ್ಯಕ್ಷ ಖಾಸಿಂ ನಾಪೋಕ್ಲು ಹಾಗೂ ಕಾರ್ಯದರ್ಶಿ ಅಮೀನ್ ಮೊಹಿಸಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *