ಆದಿ ದ್ರಾವಿಡ ಸಮಾಜದಿಂದ ಬಿ.ಆರ್ ಅಂಬೇಡ್ಕರ್ ರವರ ಜನ್ಮ ದಿನಾಚಾರಣೆ

Posted on: April 16, 2018

mdk15sdr2

ಸಿದ್ದಾಪುರ : ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ 127 ನೇ ಜನ್ಮ ದಿನಾಚಾರಣೆಯನ್ನು ನಾನಾ ಕಾರ್ಯಕ್ರಮಗಳೊಂದಿಗೆ ಆಚರಣ ಮಾಡಿದರು
ಸಿದ್ದಾಪುರ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಂ ಎಸ್ ವೆಂಕಟೇಶ್ ಮಾತನಾಡಿ ಬಾಬಾ ಸಾಹೇಬ್ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೊಡಿಸಿಕೊಂಡು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕೆಂದರು.

ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಅಧ್ಯಕ್ಷ ಜನಾರ್ಧನ ಮಾತನಾಡಿ ಜಿಲ್ಲೆಯಲ್ಲಿರುವ ಸಮುದಾಯ ಭಾಂದವರು ಮೂಲ ಸೌಕರ್ಯ ವಂಚಿತರಾಗಿ ಜೀವನ ನಡೆಸುತ್ತಿದ್ದು
ನಿವೇಶನದೊಂದಿಗೆ ಸೌಲಭ್ಯ ನೀಡಬೆಕೇಂದು ಜಿಲ್ಲಾಡಳಿತವನ್ನು ಒತ್ತಾಹಿಸಿದರು.

ಸಮಾರಂಭದಲ್ಲಿ ಹೇಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ನಾನಾ ಕ್ರೀಡೆಗಳಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಿದರು.mdk15sdr1

ಈ ಸಂದರ್ಭ ಗೌರವಾಧ್ಯಕ್ಷ ಎಂ ಶೀನ, ರಾಜ್ಯಾಧ್ಯಕ್ಷ ಲೋಕನಾಥ್, ಜಿಲ್ಲಾ ಉಪಾಧ್ಯಕ್ಷ ಜಿ,ಕುಶಾಲಪ್ಪ, ತಾಲೂಕು ಆದ್ಯಕ್ಷ ಹೆಚ್ಚ ಆರ್ ಶಿವಪ್ಪ, ಉಪಾಧ್ಯಕ್ಷ ಚಂದ್ರಶೇಖರ್,ಪ್ರಮುಖರಾದ ಜಗನ್ನಾಥ್, ವಿಶ್ವನಾಥ್, ಮಹೇಶ್, ಮೊಣ್ಣಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *