ಇಂದಿನಿಂದ ಐಮಂಡ ಕಪ್ ಕ್ರಿಕೆಟ್ ಹಬ್ಬ

Posted on: April 20, 2018

aiamanda
ಮಡಿಕೇರಿ : ಕೊಡವ ಐರಿ ಕುಟುಂಬಗಳ ಮಧ್ಯೆ ನಡೆಯುವ ಏಳನೇ ವರ್ಷದ ಕ್ರಿಕೆಟ್ ಪಂದ್ಯಾಟಕ್ಕೆ ಈ ಬಾರಿ ಮರಗೋಡು ಗ್ರಾಮದ ಐಮಂಡ ಕುಟುಂಬಸ್ಥರು ಆತಿಥ್ಯ ವಹಿಸಿದ್ದು, ಮೂರ್ನಾಡು ವಿದ್ಯಾ ಸಂಸ್ಥೆಯ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ಇಂದಿನಿಂದ (ಏ.20) ಹಣಾಹಣಿ ಆರಂಬವಾಗಲಿದೆ. ಮೂರು ದಿನಗಳ ಪಂದ್ಯಾಟದಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದ್ದು ನಾಕೌಟ್ ಮಾದರಿಯಲ್ಲಿ ಸ್ಫರ್ಧೆಗಳು ನಡೆಯಲಿವೆ. ಏಪ್ರಿಲ್ 21ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಭಾನುವಾರ ಏಪ್ರಿಲ್ 22 ರಂದು ಫೈನಲ್ ಪಂದ್ಯ ನಡೆಯಲಿವೆ.

ಉದ್ಘಾಟನಾ ಸಮಾರಂಭದಲ್ಲಿ ಕೊಡವ ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್, ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಕ್ರಿಕೆಟ್ ಸಲಾಹಾ ಸಮಿತಿ ಅಧ್ಯಕ್ಷ ಐಮಂಡ ಅಪ್ಪಣ್ಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ಇಪ್ಪತ್ತು ಸಾವಿರ ರೂ ನಗದು ಮತ್ತು ಆಕರ್ಷಕ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ಹದಿನೈದು ಸಾವಿರ ರೂ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಕ್ರಿಕೆಟ್ ಪಂದ್ಯವಾಡಿದ ಪ್ರತಿ ತಂಡಕ್ಕೂ ಸ್ಮರಣಿಕೆಯನ್ನು ನೀಡಲಾಗುತ್ತದೆ. ಜೊತೆಗೆ ಅತ್ಯುತ್ತಮ ಬ್ಯಾಟ್ಸ್ಮನ್, ಅತ್ಯತ್ತುಮ ಬೌಲರ್, ಅತ್ಯುತ್ತಮ ಆಲ್ರೌಂಡರ್, ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ.

ಅಂತಿಮ ದಿನ ಮಹಿಳೆಯರಿಗೆ ಹಗ್ಗ ಜಗ್ಗಾಟ

ಕ್ರಿಕೆಟ್ ಪಂದ್ಯಾವಳಿಯ ಅಂತಿಮ ದಿನ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಫರ್ಧೆ ಏರ್ಪಡಿಸಲಾಗಿದೆ. ವಿಜೇತ ತಂಡಕ್ಕೆ ಐದು ಸಾವಿರ ರೂ ನಗದು ಮತ್ತು ಟ್ರೋಫಿ ಹಾಗೂ ದ್ವಿತೀಯ ತಂಡಕ್ಕೆ ಮೂರು ಸಾವಿರ ರೂ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ.

ಅಂತಿಮ ದಿನ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಅವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಮತ್ತು ಐಮಂಡ ದಿವಂಗತ ಬಾಬಣ್ಣ ಅವರ ಪುತ್ಥಳಿ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿದೆ. ಹಾಗೆಯೇ ಐಮಂಡ ಕುಟುಂಬದ ಸುಮಾರು 50 ತವರು ಮನೆ ಸ್ತ್ರೀಯರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಜೊತೆಗೆ ನಾಟಿ ಔಷಧಿ ತಜ್ಱಎ ಐಮಂಡ ಕಾಮವ್ವ ಗಣಪತಿ ಹಾಗೂ ಕ್ರಿಕೆಟ್ ಸಾಧಕ ಐರೀರ ಬೋಪಯ್ಯ ಅವರನ್ನು ಸನ್ಮಾನಿಸಲಾಗುತ್ತದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *