ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಕಥುವಾ ಉನ್ನಾವೋ ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ

Posted on: April 17, 2018

1. sdpr protest

ಸಿದ್ದಾಪುರ : ಜಮ್ಮುವಿನ ಕಥುವಾ ಎಂಬಲ್ಲಿ ಎಂಟರ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಮತ್ತು ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರವನ್ನು ಖಂಡಿಸಿ, ಹಾಗೂ ಆರೋಪಿಗಳಿಗೆ ತ್ವರಿತಗತಿಯಲ್ಲಿ ಕಠೀಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಸಮಾನ ಮನಸ್ಕರ ಒಕ್ಕೂಟದ ವತಿಯಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಮೊಂಬತ್ತಿ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದರು.

ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಹಾಗೂ ನಿವೃತ್ತ ಕಂದಾಯ ಅಧಿಕಾರಿ ಶಾಮೀಲಾಗಿರುವುದು ಅಲ್ಲದೆ ಆರೋಪಿಗಳ ಪರವಾಗಿ ಜಮ್ಮು ಕಶ್ಮೀರದ ಸಚಿವರುಗಳು ಭಾಗವಹಿಸಿರುವುದು ಹಾಗೂ ಸಂತ್ರಸ್ತ ಕುಟುಂಬದ ಪರವಾಗಿ ನಿಂತ ವಕೀಲಗೆ ಬೆದರಿಕೆ ಒಡ್ಡುವ ಮೂಲಕ ದೇಶವು ವಿಶ್ವದೆದುರು ಬೆತ್ತಲೆಯಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ದೇಶ ಸ್ನೇಹದ ಬಗ್ಗೆ ಮಾತನಾಡುವವರು ಸಾಮಾಜಿಕ ಜಾಲತಾಣದಲ್ಲಿ ಕೃತ್ಯವನ್ನು ಸಮರ್ಥಿಸುವ ಮೂಲಕ ರಾಷ್ಟ್ರ ಪ್ರೇಮದ ನಿಜ ಬಣ್ಣವನ್ನು ತೋರ್ಪಡಿಸಿದ್ದಾರೆ ಎಂದು ದೂರಿದರು.

ಉತ್ತರಪ್ರದೇಶದ ಉನ್ನಾವೋದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವುದಲ್ಲದೆ ಆಕೆಯ ತಂದೆಯ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಆಡಳಿತ ಪಕ್ಷದ ಶಾಸಕ ಬಂಧನವಾಗುವ ಮೂಲಕ ಇಡೀ ದೇಶವೆ ತಲೆತಗ್ಗಿಸುವಂತಾಗಿದೆ ಎಂದ ಪ್ರತಿಭಟನಾಕಾರರು ದೇಶದಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ ವಿಶ್ವಸಂಸ್ಥೆ ಕಣ್ಣೀರು ಸುರಿಸಿದರೂ ದೇಶದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮೌನ ವಹಿಸಿರುವುದು ಅತ್ಯಂತ ಅಪಾಯಕಾರಿ ಲಕ್ಷಣವಾಗಿದೆ ಎಂದ ಪ್ರತಿಭಟನಾಕಾರರು ಅತ್ಯಾಚಾರ ಸಂಸ್ಕತಿಯ ವಿರುದ್ಧ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರೂ ಧ್ವನಿಗೂಡಿಸಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಜಿ.ಪಂ ಮಾಜಿ ಸದಸ್ಯ ಎಂ.ಎಸ್ ವೆಂಕಟೇಶ್, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷ ಎಂ.ಕೆ ಮಣಿ, ಕಾರ್ಮಿಕ ಮುಖಂಡರಾದ ಪಿ.ಆರ್ ಭರತ್, ಎನ್.ಡಿ ಕುಟ್ಟಪ್ಪ, ಮಹದೇವ್, ಸಾಮಾಜಿಕ ಕಾರ್ಯಕರ್ತ ಎ.ಎಸ್ ಮುಸ್ತಫ, ಗ್ರಾ.ಪಂ ಸದಸ್ಯರಾದ ರೆಜಿತ್ ಕುಮಾರ್ ಗುಹ್ಯ, ಮಂಜುನಾಥ್, ಶುಕೂರ್, ಶೌಕತ್ ಅಲಿ, ಎ.ಕೆ ಹಕೀಂ, ಸಾಬು, ಜಾಫರ್ ಪ್ರಮುಖರಾದ ಗಫೂರ್, ಬಶೀರ್, ಅಸ್ಕರ್ ಸೇರಿದಂತೆ ಮತ್ತಿತರರು ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *