ಕೊಟ್ಟಗೇರಿಯಲ್ಲಿ ವ್ಯಾಘ್ರನ ಕಾರ್ಯಚರಣೆ ತಾತ್ಕಾಲಿಕ ಹಿಂದಕ್ಕೆ

Posted on: April 16, 2018

K 001
ಗೋಣಿಕೊಪ್ಪಲು : ಬಾಳೆಲೆ ಸಮೀಪದ ಕೊಟ್ಟಗೇರಿಯ ಮಾಪಂಗಡ ಸಜನ್ ದೇವಯ್ಯನವರ ತೋಟದಲ್ಲಿ ಸತತ ಎಂಟು ದಿನಗಳ ಕಾಲ ಹಗಲು, ರಾತ್ರಿ ಎನ್ನದೆ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಾ.14ರಿಂದ ಕಾರ್ಯಚರಣೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದು ಸ್ಥಳದಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯುವ ತಜ್ಞರು ಹೊರತು ಪಡಿಸಿ ಇನ್ನುಳಿದ ಎಲ್ಲಾ ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.

ಶುಕ್ರವಾರ ರಾತ್ರಿಯ ವೇಳೆಯಲ್ಲಿ ಹುಲಿ ಸೆರೆಗೆ ಕಾರ್ಯತಂತ್ರ ರೂಪಿಸಿದ್ದ ಹಿರಿಯ ಅಧಿಕಾರಿಗಳಿಗೆ ಬೆಳಗಿನ ಜಾವದ ವರೆಗೂ ಹುಲಿಯ ಚಲನ ವಲನಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಕಾರ್ಯಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದಾರೆ.
ಕಾರ್ಯಚರಣೆಯ ಕೊನೆಯ ದಿನವಾದ ಶುಕ್ರವಾರದಂದು ರಾತ್ರಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಗದ್ದೆ ಬಯಲು ಸಮೀಪದಲ್ಲಿಯೇ ಮೂರು ಅಟ್ಟಣಿಗೆಗಳನ್ನು ಅಳವಡಿಸಿ ಹುಲಿಯ ಸಂಚಾರದ ಬಗ್ಗೆ ನಿಗಾ ಇಟ್ಟಿದ್ದರು..ವಿವಿಧ ಭಾಗಗಳಲ್ಲಿ ಕ್ಯಾಮೆರಾ ಅಳವಡಿಸಿದ್ದರು ಯಾವುದೇ ಕ್ಯಾಮೆರಾಕ್ಕೆ ಹುಲಿ ಸಂಚಾರ ಸೆರೆಯಾಗಿರಲಿಲ್ಲ.

ಇದರಿಂದ ಶನಿವಾರ ಮುಂಜಾನೆಯಿಂದ ಕಾರ್ಯಚರಣೆಯನ್ನು ಸದ್ಯಕ್ಕೆ ಮುಂದೂಡಲಾಗಿದ್ದು ಸತತ 8 ದಿನಗಳ ಕಾಲ ವಿಶ್ರಾಂತಿ ಇಲ್ಲದೆ ಕಾರ್ಯಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗಳಿಗೆ ಇದೀಗ ಹಿರಿಯ ಅಧಿಕಾರಿಗಳು ವಿಶ್ರಾಂತಿ ನೀಡಿದ್ದಾರೆ. ಈ ಭಾಗದಲ್ಲಿ ಹುಲಿ ಸಂಚಾರದ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಕೂಡಲೇ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ರಾತ್ರಿ ವೇಳೆಯಲ್ಲಿ ಹುಲಿಯ ಸಂಚಾರ ಕಂಡು ಬಂದ ಹಿನ್ನಲೆಯಲ್ಲಿ ಹುಲಿ ಸೆರೆಗೆ ಉನ್ನತ ಅಧಿಕಾರಿಗಳು ವಿಶೇಷ ಅನುಮತಿಯನ್ನು ಪಡೆದಿದ್ದರು. ಹಿರಿಯ ಅಧಿಕಾರಿಗಳಾದ ಡಿಎಫ್‍ಓ ಕೃಸ್ತರಾಜ್, ಎಸಿಎಫ್ ಶ್ರೀಪತಿ,ಆರ್‍ಎಫ್‍ಓ ಗಂಗಾಧರ್ ಎಸಿಎಫ್ ಪೌಲ್ ಆ್ಯಂಟೋನಿ, ಇತರ ಅಧಿಕಾರಿಗಳು,ಸಿಬ್ಬಂದಿಗಳು ರ್ಯಾಪಿಡ್ ಪೋರ್ಸ್ ತಂಡ ಸತತ 8 ದಿನಗಳ ಕಾಲ ಕಾರ್ಯಚರಣೆ ನಡೆಸಿದ್ದನ್ನು ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಸತತವಾಗಿ ಈ ಭಾಗಕ್ಕೆ ಮುಂಜಾನೆ ಇಲ್ಲಿ ಸ್ಮರಿಸಬಹುದು.

ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಹುಲಿ ಸಂಚಾರದ ಸುಳಿವು ಸಿಕ್ಕಿದ ನಂತರ ಹುಲಿ ಸೆರೆಗೆ ಹಿರಿಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆದು ಕಾರ್ಯಚರಣೆ ನಡೆಸಿದರು ಹುಲಿ ಪತ್ತೆ ಆಗಲಿಲ್ಲ. ಇದರಿಂದ ಕಾರ್ಯಚರಣೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದು ಸಿಬ್ಬಂದಿಗಳಿಗೆ ವಿಶ್ರಾಂತಿ ನೀಡಿದ್ದೇವೆ. ಸ್ಥಳದಲ್ಲಿ ಪ್ರತಿ ದಿನ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಹುಲಿ ಸಂಚಾರ ದೃಢಪಟ್ಟಲ್ಲಿ ಮತ್ತೆ ಕಾರ್ಯಚರಣೆ ಮುಂದುವರೆಸಲಾಗುವುದು.
ಶ್ರೀಪತಿ, ಎಸಿಎಫ್,ತಿತಿಮತಿ
006-ACF Sreepathi 2

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *