ಚಿಲಿಪಿಲಿ ದೇವಾಲಯದ ಅರ್ಚಕ ಸಂಶಯಾಸ್ಪದ ಸಾವು

Posted on: April 26, 2018

IMG-20180426-WA0005
ಚೆಟ್ಟಳ್ಳಿ : ಹೊಸ್ಕೇರಿ ಗ್ರಾಮಕ್ಕೆ ಒಳಪಡುವ ಚಿಲಿಪಿಲಿ ಎಂಬ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸುತಿದ್ದ ರವಿಕುಮಾರ್ ಎಂಬ ಅರ್ಚಕ ಸಂಶಯಾಸ್ಪದ ಸಾವನಪ್ಪಿದ ಘಟನೆ ನಡೆದಿದೆ.

ಅಮ್ಮತಿ ಕಾವಾಡಿ ಮೂಲದ 43 ವರ್ಷದ ರವಿಕುಮಾರ್ ಎಂಬವನು ಸುಮಾರು 2ವರ್ಷಗಳಿಂದ ಚೆಟ್ಟಳ್ಳಿ ಪೋಲೀಸ್ ಉಪಠಾಣೆ ವ್ಯಾಪ್ತಿಯ ಶತಮಾನಗಳ ಇತಿಹಾಸ ಹೊಂದಿರಿರುವ ಕಲ್ಲಿನ ಗುಹೆ ಒಳಗಿನ ಉದ್ಬವ ಕಲ್ಲಿನ ಶಿವಲಿಂಗದ ಚಿಲಿಪಿಲಿ ದೇವಾಯದಲ್ಲಿ ಅರ್ಚಕನಾಗಿ ದೇವಾಲಕ್ಕೆ ಸಂಬಂದಿಸಿದ ಮನೆಯಲ್ಲೆ ಇದ್ದು ನಿತ್ಯವೂ ಪೂಜೆಸಲ್ಲಿಸಿತಿದ್ದ.

ಕಳೆದ ಸುಮಾರು 15ದಿನ ಗಳಿಂದ ಅರ್ಚಕ ರವಿಕುಮಾರ್ ಸುಳಿವಿಲ್ಲದರಿಂದ ಅವರ ತಮ್ಮ ಮನೋಹರ್ ಮಡಿಕೇರಿ ಗ್ರಾಮಾಂತರ ಠಾಣೆಯಾದ ಬಗ್ಗೆ ಕಾಣೆಯಾದ ಬಗ್ಗೆ ದೂರು ನೀಡಿದ. ದೇವಾಲಯಕ್ಕೆ ಅರ್ಚಕರಿಲ್ಲದರಿಂದ ದೇವಾಲಯ ಸಮಿತಿಯವರು ಅರ್ಚಕರು ಬೇಕೆಂದು ಜಾಹಿರಾತು ನೀಡಿರುವ ಬಗ್ಗೆ ದೇವಾಲಯ ಸಮಿತಿಯ ಕಾರ್ಯದರ್ಶಿ ಬಲ್ಲಚಂಡ ವಿಠಲಕಾರ್ಯಪ್ಪ ಹೇಳುತ್ತಾರೆ.

ಕಳೆದ ಎರಡು ದಿನಗಳ ಹಿಂದೆ ಸಮೀಪದ ಬೆಲ್ಸ್ ಕಾಫಿ ತೋಟದಲ್ಲಿ ಕಾರ್ಮಿಕರು ತೆರಳುತಿದ್ದಾಗ ವಿಪರೀತ ದುರ್ವಾಸನೆ ಬರುತಿದ್ದ ಕಡೆ ನೋಡಿದಾದ ಕೊಳೆತ ಸ್ಥಿತಿಯಲ್ಲಿ ಮ್ರತದೇಹ ಕಂಡು ಸುತ್ತಲಿನವರಿಗೆಲ್ಲ ಮಾಹಿತಿ ನೀಡಿ ಏ.25ರಸಂಜೆ4ಕ್ಕೆ ಚೆಟ್ಟಳ್ಳಿ ಹೆಡ್‍ಕಾನ್ಸಟೇಲ್ ಪ್ರಕಾಶ್‍ರವರಿಗೆ ಮಾಹಿತಿ ತಿಳಿದ ತಕ್ಷಣ ಸಿಬ್ಬಂದಿ ಸಜನ್ನ್ ಜೊತೆ ತೆರಳಿ ಪರಿಶೀಲಿಸಿ ಮಡಿಕೇರಿ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದರು.

ಸಹೋದರ ಮನೋಹರ್‍ನ ಬಿಳಿಶರ್ಟನ್ನು ಪತ್ತೆಹಚ್ಚಿ ರವಿಕುಮಾರ್ ಎಂದು ಗುರುತಿಳಿಸಿದ.ಎಎಸ್ಪಿ ಯತೀಶ್ ಕುಮಾರ್,ಎಸ್‍ಐ ಚೇತನ್,ಎಎಸ್‍ಐ ವೆಂಕಟರಮಣ,ಹೆಡ್‍ಕಾನ್ಸಟೇಲ್ ಪ್ರಕಾಶ್ ಸಿಬ್ಬಂದಿ ಸಜನ್ನ್ ಸ್ಥಳ ಮಾಜರು ನಡೆಸಿದರು. ಮಡಿಕೇರಿ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಲಿಕಸಂಬಂದಿಕರಿಗೆ ಒಪ್ಪಿಸಲಾಯಿತು.

ದೇವಾಲಯದ ಅರ್ಚಕರ ಮನೆಯಲ್ಲಿ ರವಿಕುಮಾರ್ ಒಬ್ಬನೇ ವಾಸವಾಗಿ ಎಲ್ಲರೊಂದಿಗೂ ಉತ್ತಮ ಬಾಂದವ್ಯ ಒಂದಿದ್ದು ಕೆಲವು ಸಮಯದಿಂದ ಮಾನಸಿಕ ತೊಂದರೆ ಒಳಗಾದವನಂತೆ ಕಾಣುÂತಿದ್ದ ಬಗ್ಗೆಊರಿನವರು ಹೇಳುತಾರೆ. ಮರಣ ಹೊಂದಿ 10-12ದಿನಗಳಾದರಿಂದ ಕೊಳೆತು ದೇಹವೆಲ್ಲ ಹುಳು ತುಂಬಿ ತೆಗೆವಾಗ ರುಂಡ ಮುಂಡ ಬೇರೆಯಾದರಿಂದ ಮರಣೋತ್ತರ ಪರೀಕ್ಷೆ ವರದಿ ಬಂದನಂತೆ ನಂತರವೇ ಸಾವಿನ ನಿಖರ ಕಾರಣ ತಿಳಿಯುವುದೆಂದು ಪೋಲಿಸ್ ಮೂಲಗಳು ಹೇಳಲಾಗುತಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *