ಚೆಟ್ಟಳ್ಳಿಯಲ್ಲಿ ಮತದಾರರ ಜಾಗೃತಿ ಅಭಿಯಾನ

Posted on: April 20, 2018

hhhhhh
ಚೆಟ್ಟಳ್ಳಿ : ಕರ್ನಾಟಕ ವಿಧಾನ ಸಭಾ ಚುನಾವಣೆ ಮೇ 12 ರಂದು ನಡೆಯುವುದರಿಂದ ಮತದಾರರ ಜಾಗೃತಿ ಮೂಡಿಸಲು ಭಾರತ ಚುನಾವಣಾ ಆಯೋಗದ ವತಿಯಿಂದ ಮತದಾರರ ಜಾಗೃತಿ ಅಭಿಯಾನವನ್ನು ದಿನಾಂಕ 19/04/2018ರ ಗುರುವಾದದಂದು ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಈರಳವಳಮುಡಿ ಗ್ರಾಮದ ಮತ ಗಟ್ಟೆ ಸಂಖ್ಯೆ 227 ಜಿ ಎಲ್ ಪಿ ಶಾಲೆಯಲ್ಲಿ ಹಾಗೂ ಚೆಟ್ಟಳ್ಳಿ ವಾರ್ಡಿನ ಮತಗಟ್ಟೆ ಸಂಖ್ಯೆ 228 ಮತ್ತು 231ರ ಮತದಾನ ಜಾಗೃತಿ ಅಭಿಯಾನವನ್ನು ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆಸಲಾಯಿತು.

ಮತದಾನದ ವಿ.ವಿ ಪ್ಯಾಡ್ ತರಭೇತಿ ಕಾರ್ಯಕ್ರಮದಲ್ಲಿ ಸೆಕ್ಟರ್ ಆಫಿಸರ್ ಟಿ ಜೀವನ್ ಕುಮಾರ್ ರವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು ಈ ಸಂಧರ್ಭದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ರೀ ಬಿ.ಟಿ ವಿಶ್ವನಾಥ್, ಬಿಲ್‍ಕಲೆಕ್ಟರ್ ಚಂದ್ರಶೇಖರ್, ಕಂಪ್ಯೋಟರ್ ಆಪರೇಟರ್ ಪ್ರಶಾಂತ್ ಸಂಬಂದಿಸಿದ ಬೂತ್ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *