ಬೈಕ್​ ಮೇಲೆ ಮರ ಬಿದ್ದು ಯುವಕರಿಬ್ಬರು ಸ್ಥಳದಲ್ಲೇ ಸಾವು

Posted on: April 16, 2018

tree
ಬಾಗಲಕೋಟೆ : ಬೈಕ್ ಮೇಲೆ ಮರ ಬಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನ ಹುನ್ನೂರು ಗ್ರಾಮದ ಬಳಿ ಸೋಮವಾರ ನಡೆದಿದೆ. ಕೌಶಿಕ್ ನಂಜುಂಡಪ್ಪ (22), ಮಂಜುನಾಥ ಡಿ.ಎಸ್(19) ಎಂಬುವವರು ಮೃತಪಟ್ಟ ಯುವಕರು.

ಕೋಲಾರದ ಅರೆಹಳ್ಳಿಯ ಕೌಶಿಕ್ ಮತ್ತು ಚಿತ್ರದುರ್ಗದ ಹೊಸಕೆರೆಯ ಮಂಜುನಾಥ ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಹೋಗುವಾಗ ಈ ಅವಘಡ ಸಂಭವಿಸಿದೆ. ಜಮಖಂಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *