ಮತದಾನದ ಮಹತ್ವ ಕುರಿತ ಜಾಗೃತಿ ಅಭಿಯಾನಕ್ಕೆ ಚಾಲನೆ

Posted on: April 21, 2018

DSC04462
ಮಡಿಕೇರಿ : ಭಾರತ ಚುನಾವಣಾ ಆಯೋಗ, ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ಕೊಡಗು ಜಿಲ್ಲೆ, ಇವರ ವತಿಯಿಂದ ಮತದಾನದ ಮಹತ್ವ ಕುರಿತು ಬೀದಿ ನಾಟಕ ಕಾರ್ಯಕ್ರಮಕ್ಕೆ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

ನಗರದ ಮಹದೇವಪೇಟೆಯ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ಮತದಾನ ಮಹತ್ವದ ಜಾಗೃತಿ ಕುರಿತು ನಡೆದ ಬೀದಿನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಸ್ವೀಪ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಮಿಶ್ರ ಅವರು ಮತದಾರರ ಗುರುತಿನ ಚೀಟಿ ಪಡೆದ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸಲು ಕೈಜೋಡಿಸುವಂತೆ ಅವರು ಮನವಿ ಕೋರಿದರು.

ಚುನಾವಣಾ ಆಯೋಗವು ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಶೇಕಡವಾರು ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ತಿಳಿಸಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ ಜಿಲ್ಲೆಯ ಮೂರು ತಾಲ್ಲೂಕಿನ ವಿವಿಧ ಗ್ರಾ.ಪಂ.ಗಳಲ್ಲಿ 15 ದಿನಗಳ ಕಾಲ ವಿಧಾನಸಭಾ ಚುನಾವಣೆ ಸಂಬಂಧ ಮತದಾರರಲ್ಲಿ ಮತದಾನದ ಮಹತ್ವ ಬಗ್ಗೆ ಬೀದಿ ನಾಟಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ರಾಜು ಮತ್ತು ತಂಡದವರು ‘ಯಾವುದೇ ರೀತಿಯ ಆಮೀಷಕ್ಕೆ ಮರುಳಾಗದಿರಿ-ವಿವೇಚನೆಯಿಂದ ಮತ ಚಲಾಯಿಸಿ, ಮತದಾನ ಮಾಡಿದವರೇ ಮಹಾಶೂರರು’ ಎಂಬ ಸಂದೇಶಗಳ ಮೂಲಕ ಬೀದಿ ನಾಟಕ ಪ್ರದರ್ಶನ ಮಾಡಿ ಗಮನ ಸೆಳೆದರು.
ಮತಗಟ್ಟೆಗೆ ತೆರಳಿ ತಪ್ಪದೆ ಮತ ಚಲಾಯಿಸಿ, ರಜೆ ಇದೆ ಎಂದು ಪ್ರವಾಸಕ್ಕೆ ತೆರಳಬೇಡಿ, ಶೇಕಡವಾರು ಮತದಾನವಾಗಲು ಅರ್ಹರು ಮತ ಚಲಾಯಿಸುವಂತಾಗಬೇಕು. ಮತದಾನ ನಮ್ಮ ಹಕ್ಕು, ಪ್ರಜಾಪ್ರಭುತ್ವ ಬಲಪಡಿಸಲು ತಪ್ಪದೆ ಮತ ಚಲಾಯಿಸಿ ಎಂಬ ಸಂದೇಶವನ್ನು ಬೀದಿ ನಾಟಕದಲ್ಲಿ ಸಾರಲಾಯಿತು. ವಾಸುದೇವ್ ಇತರರು ಇದ್ದರು. DSC04470

ಏಲ್ಲೆಲ್ಲಿ ಬೀದಿ ನಾಟಕ: ಮಡಿಕೇರಿ ತಾಲ್ಲೂಕಿನ ಮೇಕೇರಿ, ಹಾಕತ್ತೂರು, ಮೂರ್ನಾಡು, ಹೊದ್ದೂರು, ನಾಪೋಕ್ಲು, ಎಮ್ಮೆಮಾಡು, ಅಯ್ಯಂಗೇರಿ, ಭಾಗಮಂಡಲ, ಚೇರಾಂಬಾಣೆ, ಬೆಟ್ಟಗೇರಿ, ಮದೆ, ಸಂಪಾಜೆ, ವಿರಾಜಪೇಟೆ ತಾಲ್ಲೂಕಿನ ಸಿದ್ದಾಪು, ಮಾಲ್ದಾರೆ, ಚೆನ್ನಯ್ಯನ ಕೋಟೆ, ಪಾಲಿಬೆಟ್ಟ, ಹೊಸೂರು, ಕಾರ್ಮಾಡು, ಅಮ್ಮತ್ತಿ, ಕಣ್ಣಂಗಾಲ, ಕಾಕೋಟುಪರಂಬು, ಕದನೂರು, ಕೆದಮುಳ್ಳೂರು, ಚೆಂಬೆಳ್ಳೂರು, ಬೇಟೋಳಿ, ಆರ್ಜಿ, ಬಿಟ್ಟಂಗಾಲ, ಹಾತೂರು, ದೇವರಪುರ, ತಿತಿಮತಿ, ಬಾಳೆಲೆ, ನಿಟ್ಟೂರು, ಪೊನ್ನಂಪೇಟೆ, ಪೊನ್ನಪ್ಪ ಸಂತೆ, ಕಿರುಗೂರು, ಅರವತ್ತೂಕ್ಲು.

ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ, ವಾಲ್ನೂರು, ನಂಜರಾಯಪಟ್ಟಣ, ಗುಡ್ಡೆಹೊಸೂರು, ಮುಳ್ಳುಸೋಗೆ, ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ಗಣಗೂರು, ಆಲೂರು ಸಿದ್ದಾಪುರ, ನಿಡ್ತ, ಶನಿವಾರಸಂತೆ, ಬೆಸೂರು, ಕೊಡ್ಲಿಪೇಟೆ, ಹಂಡ್ಲಿ, ದುಂಡಳ್ಳಿ, ಗೌಡಳ್ಳಿ, ದೊಡ್ಡಮಳ್ತೆ, ಚೌಡ್ಲು, ನೆರುಗಳಲೆ, ಬೇಳೂರು, ಐಗೂರು, ಸುಂಟಿಕೊಪ್ಪ, 7 ನೇ ಹೊಸಕೋಟೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *