ಸಮಾಜವಾದಿ ಪಕ್ಷದಿಂದ ಕಿಶನ್ ಉತ್ತಪ್ಪ ಕಣಕ್ಕೆ

Posted on: April 21, 2018

FB_IMG_1524292750189
 ಮಡಿಕೇರಿ : ಮಡಿಕೇರಿ ಕ್ಷೇತ್ರಕೆ ಸ್ಪರ್ಧಿಸಲು ಸಮಾಜವಾದಿ ಪಕ್ಷದಿಂದ ಜಿಲ್ಲಾ ಸಮಾಜವಾದಿ ಪಕ್ಷದ ಅಧ್ಯಕ್ಷ ಚೀಯಂಡಿರ ಕಿಶನ್ನ್ ಉತ್ತಪ್ಪನಿಗೆ ಪಕ್ಷದ ಬಿಫಾರಂ ನೀಡಲಾಗಿದೆ.

ಪಕ್ಷದ ಕೇಂದ್ರ ಕಚೇರಿಯ ಆದೇಶದನ್ವಯ ಏಪ್ರೆಲ್ 17ರ ಮಂಗಳವಾರ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯು,ರಾಜ್ಯ ಯುವ ಘಟದ ಅಧ್ಯಕ್ಷ ಕಿರನ್ ಚಿಟ್ಟಿರವರ ಸಮ್ಮುಖದಲ್ಲಿ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಬಿಫಾಂ ನೀಡಲಾಗಿದೆ. ಸಮಾಜವಾದಿ ಪಕ್ಷದಿಂದಕೊಡಗು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ದಿಸಲು ಅವಕಾಶ ನೀಡಲಾಗಿದೆ. ಸೋಮವಾರ ಕಿಶನ್ನ್ ಉತ್ತಪ್ಪ ಚುನಾವಣಾ ನಾಮಪತ್ರ ಸಲ್ಲಿಸಲಿದ್ದಾರೆ.FB_IMG_1524231212198

ಮಡಿಕೇರಿ ತಾಲೂಕಿನ ಹೊಸಕೇರಿ ಗ್ರಾಮದ 31 ವಯಸ್ಸಿದ ಕಿಸನ್ ಉತ್ತಪ್ಪ 7ವರ್ಷ ಚಿತ್ರೋದ್ಯಮದಲ್ಲಿ ನಟನಾಗಿ ಸಹಾಯಕ ನಿರ್ದೇಶಕನಾಗಿ 6 ದಾರಾವಾಹಿ ಹಾಗು 3 ಚಲನಚಿತ್ರದಲ್ಲಿ ನಟಿಸಿ ನಿದೇಶನವನ್ನು ಮಾಡಿದ್ದಾನೆ. ಜೊತೆಗೆ ಹಲವು ವರ್ಷಗಳಿಂದ ಹಲವು ಸಂಘಟನೆಗಳಲ್ಲಿ ಭಾಗವಹಿಸಿ ಸಾಮಾಜದಲ್ಲಿ ಗುರುತಿಸಿಕೊಂಡಿದ್ದುಈಸಲ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಮುಂದಾಗಿದ್ದಾನೆ. ಸಮಾಜವಾದಿ ಪಕ್ಷಕ್ಕೆ ತನ್ನ ಒಲವನ್ನು ತೋರಿದ್ದು ಯುವಕನಾದ ಕಿಸಾನ್ ಉತ್ತಪ್ಪನಿಗೆ ಈ ಬಾರಿಯ ಚುನಾವಣೆಯಲ್ಲಿ ಪ್ರತಿನಿಧಿಸಲು ಪಕ್ಷದ ಸಮತ್ತಿಯೂ ದೊರೆತಿದೆ.

ಕೊಡಗಿನ ಸಂಸ್ಕ್ರತಿ, ಪರಿಸರ ಹಾಗು ಕಾವೇರಿ ಮಡಿಲು ದಿನೇ ದಿನೇಹಾಳಾಗು ತಿದ್ದು ಉಳಿಸಿ ಬೆಳೆಸಲು ಶ್ರಮಿಸುತೇನೆ. ಜೊತೆಗೆ ಕೊಡಗಿನಲ್ಲಿ ಯುವ ನಾಯಕರು ರಾಜಕೀಯವಾಗಿ ಮುಂದೆ ಬಂದಾಗ ಮಾತ್ರ ಯುವಕರಿಗೆ ಅವಕಾಶದೊರೆಯುವುದೆಂದು ಕಿಶನ್ನ್ ಉತ್ತಪ್ಪ ಹೇಳುತ್ತಾನೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *