ಸರಕಾರದ ಹಿಂದೆ ತೆರೆಮರೆಗೆ ಸರಿದ ಶುದ್ಧ ಕುಡಿಯುವ ನೀರಿನ ಘಟಕ

Posted on: April 16, 2018

WhatsApp Image 2018-04-16 at 3.37.52 PM
ಮಡಿಕೇರಿ : ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರವು ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರತಿ ಗ್ರಾಮದಲ್ಲಿ ಸ್ಥಾಪಿಸುವಾಗ ಜನರು ಹೊಗಳಿದ್ದೇ ಹೊಗಳಿದ್ದು .ಆದರೆ ಕೆಲವು ವಿರೋಧ ಪಕ್ಷದ ಕಾರ್ಯಕರ್ತರು ,ಸಿದ್ದರಾಮಯ್ಯ ಹೋಗುವಾಗ ಅದು ಅವರ ಜೊತೆಯಲ್ಲಿಯೇ ಹೋಗುತ್ತೆ ಎಂದು ಕಿಡಿಗೇಡಿತನದ ಮಾತನಾಡಿದ್ದರು .

ಈಗ ಅದು ನಿಜವಾಗಿದೆ ಅನ್ನಿಸುತ್ತದೆ .ಏಕೆಂದರೆ ಮಡಿಕೇರಿ ನಗರದಲ್ಲಿ ಸುದರ್ಶನ ವೃತ್ತದಲ್ಲಿ ಮತ್ತು ರಾಜಾಸೀಟಿನಲ್ಲಿ ಎರಡು ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿತ್ತು .ಅದು ನೀರಿಕ್ಷೆಗೂ ಮೀರಿ ಮಡಿಕೇರಿಯು ಅಲ್ಲದೆ ಸುತ್ತಮುತ್ತಲ ಹತ್ತರಿಂದ ಹದಿನಾರು ಕಿಲೋಮೀಟರ್ಗಳವರೆಗಿನ ಜನರಿಗೆ ಕುಡಿಯಲು ಅನುಕೂಲವಾಗಿತ್ತು .ಆದರೆ ಯಾವಾಗ ಚುನಾವಣೆಯ ನೀತಿ ಸಂಹಿತೆ ಜಾರಿಯಾಯಿತೋ ಆವಾಗಲೇ ಅದರ ಬೋರ್ಡು ಕಾಣೆಯಾಗುವುದರ ಜೊತೆಗೆ ಅದರ ಬಾಗಿಲಿಗೂ ಬೀಗ ಜಡಿಯಲಾಯಿತು .ಹಲವಾರು ಮಂದಿ ದಿನವೂ ಕ್ಯಾನುಗಳ ಜೊತೆಯಲ್ಲಿ ಬಂದು ಪೆಚ್ಚು ಮೊರೆ ಹಾಕಿಕೊಂಡು ಬಂದ ದಾರಿಗೆ ಸುಂಕವಿಲ್ಲವೆಂದು ಹೋಗುವುದು ನೋಡಲು ಸಾಮಾನ್ಯವಾಗಿ ಬಿಟ್ಟಿದೆ.

ಇನ್ನು ರಾಜಾಸೀಟಿನ ಬಳಿಯಲ್ಲಿರುವ ಘಟಕವು ಐದು ರೂಪಾಯಿಯ ನಾಣ್ಯವನ್ನು ಹಾಕಿದರೆ ಅದನ್ನು ನುಂಗಿ ನೀರನ್ನು ಬಿಡದೆ ಬಾಗಿಲು ಮುಚ್ಚದೆ ಅನಾಥವಾಗಿ ನಿಂತಂತೆ ಭಾಸವಾಗುತ್ತದೆ .ಕೊನೆಯದಾಗಿ ಇದ್ದಕೆ ಯಾರು ಹೊಣೆ ..ಜಿಲ್ಲಾಡಳಿತವೋ ಅಥವಾ ಸಿದ್ದರಾಮಯ್ಯನವರ ಸರಕಾರವೋ ತಿಳಿಯುತ್ತಿಲ್ಲ .ಅಂತೂ ಕಿಡಿಗೇಡಿಗಳ ಮಾತು ನಿಜವಾದಂತೆ ಆಯಿತು ಎಂದು ಜನ ಮಾತನಾಡುತ್ತಿರುವುದು ಅಂತೂ ಗ್ಯಾರೆಂಟಿ ..

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *