40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದರೂ ಕಾಂಗ್ರೆಸಿನ ಈ ನಾಯಕನಿಗೆ ಟಿಕೇಟಿಲ್ಲ

Posted on: April 16, 2018

prakasham_nnr_newsk_79725
ನವದೆಹಲಿ : ಕಳೆದ 40 ವರ್ಷಗಳಿಂದ ಪಕ್ಷದ ಪರವಾಗಿ ದುಡಿಯುತ್ತಲಿದ್ದರೂ ನನಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗಲಿಲ್ಲ. ಹಿರಿಯ ನಾಯಕರ ಕಾಲು ಹಿಡಿದರೂ ಟಿಕೆಟ್ ಮಾತ್ರ ಸಿಗಲೇ ಇಲ್ಲ ಎಂದು ಕಾಂಗ್ರೆಸ್ ನ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್. ಎಸ್. ಪ್ರಕಾಶಂ ಅವರು ಅತೀವ ನೋವಿನಿಂದ ನುಡಿದಿದ್ದಾರೆ.

ಅಸಂಘಟಿತ ಕಾರ್ಮಿಕರ ಪರವಾಗಿ ಕಳೆದ 40 ವರ್ಷಗಳಿಂದ ಕೆಲಸ ಮಾಡುತ್ತಲಿದ್ದೇವೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಬೆಂಬಲಿಗನಾಗಿದ್ದರೂ ನನಗೆ ಟಿಕೆಟ್ ಸಿಗಲಿಲ್ಲ ಎಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಕಾಶಂ ಕಣ್ಣೀರಿಡುತ್ತಾ ತಿಳಿಸಿದರು.

ನಿನ್ನೆ ಕಾಂಗ್ರೆಸ್ ಟಿಕೆಟ್ ಪಟ್ಟಿ ಬಿಡುಗಡೆಗೆ ಮೊದಲೇ ರಾಜ್ಯಾದಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *