ಅಪ್ಪಚ್ಚುರಂಜನ್ಗೆ ಸ್ವಾಗತ ಕೋರಿದ ಚೆಟ್ಟಳ್ಳಿ ಬಿಜೆಪಿ ಕಾರ್ಯಕರ್ತರು

Posted on: May 17, 2018

20180515_172417 ಚೆಟ್ಟಳ್ಳಿ : ‌ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಬಿಜೆಪಿ ಪಕ್ಷದಿಂದ ಗೆಲುವನ್ನು ಸಾಧಿಸಿರುವ  ಅಪ್ಪಚ್ಚುರಂಜನ್ ರವರು ಸಂಜೆ ಐದು ಮೂವತ್ತು ಗಂಟೆಗೆ ಚೆಟ್ಟಳ್ಳಿಯಲ್ಲಿ ಸೇರಿ ಕಾರ್ಯಕರ್ತರ ಉದ್ದೇಶಿಸಿ ಗೆಲುವನ್ನು ಸಾಧಿಸಲು ಕಾರಣರಾದ ಎಲ್ಲರಿಗೂ ವಂದಿಸಿದರು.

ಚೆಟ್ಟಳ್ಳಿಯ ಬಿಜೆಪಿ ಕಾರ್ಯಕರ್ತರು ಅಪ್ಪಚ್ಜುರಂಜನ್ ಅವರನ್ನು  ಜಯಘೋಷಗಳೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಚೆಟ್ಟಳ್ಳಿಯ ಜನಪರ ಹೋರಾಟ ಸಮಿತಿಯ ಸಂಚಾಲಕ ಹಾಗೂ ಬಿಜೆಪಿಯ ಹಿರಿಯ ಕಾರ್ಯಕರ್ತ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಲ್ಲಾರಂಡ ಕಂಠಿ ಕಾರ್ಯಪ್ಪ ಬಿಜೆಪಿಯ ಕಾರ್ಯಕರ್ತರು ಹಾಜರಿದ್ದರು .20180515_172431

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *