ಕುಲ್ಲೇಟಿರ ಹಾಕಿ ಕೂತಂಡ ಬೋಪಣ್ಣ ಹ್ಯಾಟ್ರೀಕ್ ಸಾಧನೆ

Posted on: May 3, 2018

CHENDRIMADA vs BACHIRA (30)

ನಾಪೋಕ್ಲು : 22 ನೇ ವರ್ಷದ ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಕೋಂಗೆಟ್ಟೀರ, ಬೊವ್ವೇರಿಯಂಡ, ಬಾಚೀರ, ಅನ್ನಾಡೀಯಂಡ, ಕೂತಂಡ, ಕಂಗಾಂಡ, ಅಪ್ಪಚ್ಚೀರ, ಮಾಚೀಮಾಂಡ, ತಂಡಗಳು ವಿಜಯ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದು ಕೊಂಡವು.

ಇಂದು ನಡೆದ ಮೊದಲ ಪಂದ್ಯದಲ್ಲಿ ಕೋಂಗೆಟಿರ ಮತ್ತು ಪಟ್ಟಚೆರುವಂಡ ತಂಡಗಳ ನಡುವೆ ನಡೆದು ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2-2 ರ ಸಮಬಲ ಸಾಧಿಸಿದವು, ಕೋಂಗೇಟಿರ ಪರ ಸುಬ್ಬಯ್ಯ, ಆಯುಷ್, ಗೋಲು ಗಳಿಸಿದರೆ, ಪಟ್ಟಚೇರುವಂಡ ಅನೀಶ್ ಉತ್ತಯ್ಯ, ಪೆವ್ಮ್ಮಯ್ಯ ಗೋಲುಗಳಿಸಿದರು ನಂತರ ಟೈ ಬ್ರೇಕರ್ ಅಳವಡಿಸಲಾಗಿ ನಂತರ 5-3 ಗೋಲುಗಳಿಂದ ಕೋಂಗೇಟಿರ ತಂಡ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದು ಕೊಂಡಿತು.CHENDRIMADA vs BACHIRA (61)

ನಂತರದ ಪಂದ್ಯದಲ್ಲಿ ಬೊವ್ವೇರಿಯಂಡ ತಂಡವು ಕೋದೆಂಗಡ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಏಕ ಪಕ್ಷಿಯವಾಗಿದ್ದ ಪಂದ್ಯದಲ್ಲಿ ಬೊವ್ವೇರಿಯಂಡ ಪರ ಜೀತನ್ ಕಾಳಪ್ಪ 2, ಸಚಿನ್ ಮುತ್ತಣ್ಣ 1 ಗೋಲು ಬಾರಿಸಿ ಮಿಂಚಿದರು.

ನಂತರದ ಪಂದ್ಯದಲ್ಲಿ ಅಪ್ಪಚ್ಚೀರ ತಂಡವು ಬೆರೇರ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಅಪ್ಪಚ್ಚೀರ ಪರ ಆಶೀತ್ ಅಯ್ಯಪ್ಪ, ದರ್ಶನ್ ಚಂಗಪ್ಪ, ಗೋಲು ಹೊಡೆದರೆ, ಬೆರೇರ ಸ್ರರಜ್ 1 ಗೋಲು ಹೊಡೆದು ಅಂತರವನ್ನು ತಗ್ಗಿಸಿಕೊಂಡರು.

ಎರದನೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಾಚೀರ ತಂಡವು ಚೇಂದ್ರಿಮಾಡ ತಂಡವನ್ನು 3-0 ಗೋಲುಗಳಿಂದ ಸುಲಭವಾಗಿ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದು ಕೊಂಡಿತು. ಬಾಚೀರ ಪರ ಸಚಿನ್ ಪೊನ್ನಪ್ಪ 2 ಗೋಲು ಹೊಡೆದರೆ ಚಂಗಪ್ಪ 1 ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು.

ನಂತರದ ಪಂದ್ಯದಲ್ಲಿ ಅನ್ನಾಡೀಯಂಡ ತಂಡವು ನಾಪಂಡ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಅನ್ನಾಡೀಯಂಡ ಪರ ಸಜನ್ ಸೋಮಯ್ಯ, ವಿಕಾಶ್ ಉತ್ತಯ್ಯ, ನವೀನ್ ನಾಚಪ್ಪ, ಗೋಲು ಹೊಡೆದರು.

ನಂತರದ ಪಂದ್ಯದಲ್ಲಿ ಚಾಂಪಿಯನ್ ಕೂತಂಡ ತಂಡವು ಬೊಪ್ಪಂಡ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. ಕೂತಂಡ ಪರ ಬೋಪಣ್ಣ ಹ್ಯಾಟ್ರೀಕ್ ಗೋಲು ಬಾರಿಸಿದರೆ ಸಜನ್ ದೇವಯ್ಯ 1 ಗೋಲು ಬಾರಿಸಿ ಮಿಂಚಿದರು.

ನಂತರದ ಪಂದ್ಯದಲ್ಲಿ ಕಂಗಂಡ ತಂಡವು ಅಜ್ಜೆಟ್ಟೀರ ತಂಡವನ್ನು 3-1 ಗೋಲುಗಳಿಂದ ಸೋಲಿಸಿತು. ಕಂಗಾಂಡ ಪರ ಪುನಿತ್ ಮುತ್ತಪ್ಪ 1, ಅರುಣ್ ಮಂದಣ್ಣ 2, ಅಜ್ಜೇಟಿರ ಶಂಭು ಪಳಂಗಪ್ಪ 1 ಗೋಲುಬಾರಿಸಿ ಅಂತರವನ್ನು ತಗ್ಗಿಸಿಕೊಂಡರು.

ನಂತರದ ಪಂದ್ಯದಲ್ಲಿ ಮಾಚೀಮಂಡ ತಂಡವು ಅಲ್ಲಂಡ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಮಾಚೀಮಾಂಡ ತಂಡದ ಪರ ದರ್ಶನ್, ಅಪ್ಪಣ್ಣ, ಗೋಲು ಬಾರಿಸಿ ಮಿಂಚಿದರು.

ನಾಳೆ ಮಕ್ಕಿ ಹಬ್ಬದ ಪ್ರಯುಕ್ತ ಹಾಕಿ ಪಂದ್ಯಾಟಕ್ಕೆ ವಿರಾಮ ಇದ್ದು, ಇದೇ ಮೈದಾನದಲ್ಲಿ ತಾ, 4 ರಂದು ಮಹಿಳಾ ದಿನಾಚರಣೆ ನಡೆಯಲಿದೆ.

CHENDRIMADA vs BACHIRA (52)

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *