ನನ್ನನ್ನು ಗೆಲ್ಲಿಸಿದ್ದೇ ಆದಲ್ಲಿ ಕಾವೇರಿ ತಾಲ್ಲೂಕಿಗೆ ಮೊದಲ ಆದ್ಯತೆ ಕೆ.ಪಿ.ಚಂದ್ರಕಲಾ

Posted on: May 5, 2018
IMG_20180504_133052
ಕುಶಾಲನಗರ : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿದ್ದಲ್ಲಿ ಕಾವೇರಿ ತಾಲ್ಲೂಕಿಗೆ ಮೊದಲ ಆದ್ಯತೆಯನ್ನು ನೀಡುತ್ತೇನೆ ಎಂದು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾರವರು ಭರವಸೆ ನುಡಿದಿದ್ದಾರೆ.
ಕುಶಾಲನಗರದ ಹಿಲಾಲ್ ಮಸೀದಿ ಬಳಿ ಮತಯಾಚನೆ ನಡೆಸಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾವೇರಿ ತಾಲ್ಲೂಕಿನ ವಿಷಯವಾಗಿ ಓರ್ವ ಕುಶಾಲನಗರದ ನಾಗರಿಕನಿಗಿರುವಷ್ಟು ಕಾಳಜಿ ನಮ್ಮ ಕ್ಷೇತ್ರದ ಶಾಸಕರಿಗಿರಲಿಲ್ಲ. ಕಾವೇರಿ ತಾಲ್ಲೂಕಿನ ವಿಷಯವಾಗಿ ಪಕ್ಷಾತೀತವಾಗಿ ಹೋರಾಟಗಳು ನಡೆಸುವಾಗ ಶಾಸಕರು ನಿರುಸ್ತಾಹಿತರಾಗಿದ್ದರು. ಶಾಸಕರು ತಾಲ್ಲೂಕಿನ ವಿಷಯವಾಗಿ ತೋರಿರುವ ಧೋರಣೆಯನ್ನು ಜನರು ಸಹಿಸುವುದಿಲ್ಲ. ಈ ಭಾರಿ ಶಾಸಕರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ‌ ಎಂದು ಟೀಕಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಮಾತನಾಡಿ, ಕಾವೇರಿ ತಾಲ್ಲೂಕಿನ ವಿಷಯವಾಗಿ ಕೆ.ಪಿ.ಚಂದ್ರಕಲಾರವರು ಹಗಲು ರಾತ್ರಿಯೆಂದು ದುಡಿದಿದ್ದಾರೆ. ನಾವು ಹೋರಾಟ, ಪ್ರತಿಭಟನೆ ಮುಂತಾದವುಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.
ಆದರೆ ಶಾಸಕರು ಕಾವೇರಿ ತಾಲ್ಲೂಕಿನ ವಿಷಯವಾಗಿ ಹಿಂದೇಟು ಹಾಕಿದ ಕಾರಣ ಇಂದು ಕಾವೇರಿ ತಾಲ್ಲೂಕು ಕೈತಪ್ಪಿಹೋಗಿದೆ. ಈ ಜನರು ಕೆ.ಪಿ.ಚಂದ್ರಕಲಾರವರನ್ನು ಜಯಗೊಳಿಸಲಿದ್ದಾರೆ ಎಂದರು.
ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಕರಿಯಪ್ಪ, ಪ್ರಮುಖರಾದ ಮುಸ್ತಫಾ, ಶರೀಫ್, ಜಯಪ್ರಕಾಶ್, ಚಂದನ್ ಹಾಗೂ ಮತ್ತಿತರರು ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *