ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಆಟ್ ಪಾಟ್ ಪಡಿಪು ತರಬೇತಿ

Posted on: May 17, 2018

IMG-20180517-WA0022
ಮಡಿಕೇರಿ : ಕೊಡವ ಜನಾಂಗದ ಆಚಾರ ವಿಚಾರವನ್ನು ಉಳಿಸುವ ನಿಟ್ಟಿನಲ್ಲಿ ಕೊಡವ ಮಕ್ಕಡಕೂಟ ಹಾಗೂ ಕೊಡವ ಪೊಮ್ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಆಟ್ ಪಾಟ್ ಪಡಿಪು ಕಾರ್ಯಕ್ರಮ ಆಯೋಜಿಸಲಾಗಿದೆ. ಮೇ 14ರಿಂದ ಆರಂಭಗೊಂಡ ಕಾರ್ಯಕ್ರಮ ಮೇ. 25ರವರೆಗೆ ನಡೆಯಲಿದ್ದು, ಮೇ 25 ರಂದು ಸಮಾರೋಪ ಸಮಾರಂಭ ನಡೆಯಲಿದೆ.

ಇತ್ತೀಚಿನ ದಿನಗಳಲ್ಲಿ ಕೊಡವ ಸಂಪ್ರದಾಯ ನಶಿಸುತ್ತಿದೆ.ಇಂತಹ ಸಂದರ್ಭದಲ್ಲಿ ಕೊಡವ ಮಕ್ಕಡಕೂಟದ ವತಿಯಿಂದಕಳೆದ 5 ವರ್ಷಗಳಿಂದ ಸತತವಾಗಿ ಮಕ್ಕಳಿಗೆ ಕೊಡವಜನಾಂಗದ ಸಂಸ್ಕತಿ, ಆಚಾರ ವಿಚಾರವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದೆ.

ಇದು 6ನೇ ವರ್ಷದ ಬೇಸಿಗೆ ಶಿಬಿರವಾಗಿದ್ದು, ಈ ಬಾರಿಯ ಕಾರ್ಯಕ್ರಮಕ್ಕೆ ಕೊಡವ ಪೊಮ್ಮಕ್ಕಡ ಕೂಟ ಸಹಕಾರ ನೀಡಿದೆ.ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಆಟ್ ಪಾಟ್ ಪಡಿಪು ಕಾರ್ಯಕ್ರಮ ನಡೆಸಲಾಗುತ್ತಿದೆ.IMG-20180517-WA0021

ಕೊಡವ ಮಕ್ಕಡಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮಾತನಾಡಿ, ಶಿಬಿರದಲ್ಲಿ ಬೊಳಕಾಟ್, ಕೋಲಾಟ್, ಪರೆಯಕಳಿ, ಉಮ್ಮತಾಟ್, ಸಂಬಂಧಅಡ್‍ಕುವೊ, ಬಾಳೊಪಾಟ್, ಕೊಡವ ವಾರಗಳು, ತಿಂಗಳುಗಳು ಮತ್ತಿತರ ವಿಚಾರಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.ಕೊಡವ ಸಂಸ್ಕತಿಯನ್ನು ಹೇಗೆ ಉಳಿಸಿ ಬೆಳೆಸಬೇಕೆಂದು ಸೆಮಿನಾರ್ ಮೂಲಕ ತಿಳಿಸಿಕೊಡುತ್ತಿದ್ದೇವೆ ಎಂದರು.

ಪ್ರತಿ ಬಾರಿಯಂತೆಈ ಬಾರಿಯಕಾರ್ಯಕ್ರಮವೂ ಯಶಸ್ವಿಯಾಗುವ ನಿಟ್ಟಿನಲ್ಲಿ ಜನಾಂಗ ಬಾಂಧವರು ಅಗತ್ಯ ಸಹಕಾರ ನೀಡಬೇಕು ಹಾಗೂ ಪೋಷಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಜಾನಪದಕಲಾವಿದ ನಾಪಂಡಈರಪ್ಪ ಮಾತನಾಡಿ, ಕೊಡವ ಜನಾಂಗದವರು ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಕೊಡವ ಜನಾಂಗದ ಮಕ್ಕಳಿಗೆ ಚಿಕ್ಕಂದಿನಿಂದಲೇ ತಮ್ಮ ಸಂಸ್ಕರತಿ, ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಾನಪದ ಕಲಾವಿದರಾದ ನಾಪಂಡ ಈರಪ್ಪ, ಮೇವಡ ನಾಣಯ್ಯ, ಮುಂಡಂಡ ಪೂವಪ್ಪ, ಬೊಳ್ಳಜೀರ ಬಿ. ಅಯ್ಯಪ್ಪ, ಕೊಡವ ಪೊಮ್ಮಕ್ಕಡಕೂಟದಪ್ರಮುಖರಾದಮಾದೇಟೀರ ಪ್ರಮೀಳಾ ಜೀವನ್, ಬೊಳ್ಳಜೀರ ಯಮುನಾ ಅಯ್ಯಪ್ಪ, ಮುಕ್ಕಾಟಿರ ಅಂಜು ಸುಬ್ರಮಣಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.IMG-20180517-WA0017

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *