ಮೋದುರಿನಲ್ಲಿ ಒಂಟಿ ಪುಂಡಾನೆ ಸೆರೆ

Posted on: May 17, 2018

IMG-20180516-WA0023

ಚೆಟ್ಟಳ್ಳಿ : ಹಲವು ತಿಂಗಳಿಂದ ಮೋದೂರಿನಲ್ಲಿ ಒಂಟಿಯಾಗಿ ಪುಂಡಾಟಿಕೆ ತೋರುತ್ತಾ ಸುತ್ತಲಿನ ಗ್ರಾಮಸ್ಥರಿಗೆ ಹಾಗು ಅರಣ್ಯ ಇಲಾಖೆಗೆ ತಲೆ ನೋವಾಗಿದ್ದ ಒಂಟಿ ಪುಂಡಾನೆಯನ್ನು ಅರಣ್ಯ ಇಲಾಖೆ ಎರಡು ದಿನಗಳ ಹರಸಾಹಸದಿಂದ ಸೆರೆಹಿಡಿದು ಬಂಧಿಸಲಾಯಿತು.

ಒಂದುದಿನ ಮುಂಚಿತವಾಗಿ ಒಂಟಿ ಪುಂಡಾನೆಯ ಬಂಧನಕ್ಕೆ ಬೆಳಗಿನ ಜಾವದಿಂದ ಸಂಜೆಯವರೆಗೆ ಕಾರ್ಯಚರಣೆ ಗಿಳಿದರೂ ಅರಣ್ಯ ಇಲಾಖೆಯತಂಡಕ್ಕೆ ಸಿಗಲೇ ಇಲ್ಲ.ಅರಣ್ಯ ಅಧಿಕಾರಿಗಳ ತಂಡರಾತ್ರಿಇಡಿ ಒಂಟಿ ಪುಂಡಾನೆಯ ಚಲನ ವಲನವನ್ನು ಹುಡುಕಿತು. ಉಪವಲಯ ಅರಣ್ಯಧಿಕಾರಿಗಳಾದ ದೇವಿಪ್ರಸಾದ್ ಬಾನಂಡ ಹಾಗು ಸುಬ್ರಮಣಿ ತಂಡ ಲಲಿತಾದ್ರಿ ಎಸ್ಟೇಟಿನ ಪಕ್ಕ ಇರುವ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಬೆಳಿಗಿನಿಂದಲೇ ಆನೆ ಬಂಧನಕ್ಕೆ ಸನ್ನದರಾದರು.IMG-20180516-WA0022

ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್,ವನ್ಯಜೀವಿ ಸಂರಕ್ಷಣಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ಜಯ, ಸೂಮವಾರ ಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಎಂ.ಎಸ್‍ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಅರುಣ್, ಉಪವಲಯ ಅರಣ್ಯಾಧಿಕಾರಿಗಳಾದ ದೇವಿಪ್ರಸಾದ್ ಬಾನಂಡ, ಮಂಜುನಾಥ್ ಗೂಳಿ, ಅನಿಲ್ ಡಿಸೋಜ, ವಿಲಾಸ್, ಆರ್‍ಆರ್‍ಟಿತಂಡ, ಅರಣ್ಯಸಿಬ್ಬಂದಿಗಳಾದ ಯತೀಶ್, ಗಣೇಶ್, ದಿನೇಶ್‍ಅರಣ್ಯ ಸಿಬ್ಬಂದಿಗಳು,ಆನೆ ಮಾವುತರು,ಕಾವಾಡಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದರು.

ಮದ್ಯಾಹ್ನಒಂಟಿ ಪುಂಡಾನೆಯಿರುವ ಸ್ಥಳಗೊತ್ತು ಮಾಡಿದ ಅರಣ್ಯಅಧಿಕಾರಿಗಳು ಹಾಗು ಹುಣುಸೂರು ವಿಭಾಗದ ವೈದ್ಯಾಧಿಕಾರಿಗಳಾದ ಡಾ.ಮುಜೀಬ್‍ರವರ ಮಾರ್ಗದರ್ಶನದಂತೆ ಶಾರ್ಪ್‍ಶೂಟರ್ ವೆಂಕಟೇಶ್‍ರವರು ಸಾಕಾನೆಯ ಮೇಲಿಂದ ಗುರಿಇಟ್ಟು ಅರವಳಿಕೆ ಗುಂಡನ್ನು ಹೊಡೆದರು.ಆನೆಗೆ ಗುಂಡುತಾಗಿದರಭಸಕ್ಕೆ ಸುಮಾರು 1.50 ಕಿಮೀ ದೂರ ಓಡತೊಡಗಿ ನಿಶಕ್ತಿಯಾಗಿ ನಿಂತಿತ್ತು.IMG-20180515-WA0046

ದುಬಾರೆ ಸಾಕಾನೆ ಶಿಬಿರದ ಧನುಂಜಯ, ಕಂಜನ್, ವಿಕ್ರಮ,ಹರ್ಷ ಹಾಗು ಮತ್ತಿಗೋಡಿನಕ್ರಷ್ಣ ಹಾಗು ಅಭಿಮನ್ಯು ಸುತ್ತುವರಿದು ನಿಂತಿತ್ತು.ಮಾವುತರು, ಕಾವಾಡಿಗಳು,ಅರಣ್ಯ ಸಿಬ್ಬಂದಿಗಳು ಪುಂಡಾನೆಯ ಕೈಕಾಲುಗಳಿಗೆ ಹಗ್ಗ ಹಾಗು ಕಬ್ಬಿಣದ ಸರಪಣಿಯಿಂದ ಬಂಧಿಸಿದರು.ಸಾಯಿಕ್ರಷ್ಣಎಸ್ಟೇಟ್‍ನ ಪಕ್ಕ ಆನೆಯನ್ನು ಕರೆತಂದು. ಸಾಕಾನೆಗಳಾದ ಕ್ರಷ್ಣ, ಹರ್ಷಕಂಜನ್ ಸಹಾಯದಿಂದ ಕೇಜ್‍ಹೊಂದಿರುವ ಲಾರಿಗೆ ಪುಂಡಾನೆಯನ್ನು ಹತ್ತಿಸಲು ಪ್ರಯತ್ನಿಸಿದರೂ ಏರದೆ ಪುಂಡಾಟಿಕೆತೋರಿತು.

ಒಳನುಗ್ಗುತಿದ್ದಂತೆ ಹಿಂದೆ ಸರಿದಕಾಡಾನೆಯನ್ನುಒಳ ತಳ್ಳುತಿದ್ದಂತೆ ಲಾರಿಯ ಪ್ಲಾಟ್‍ಫಾಮ್ ಮರಿದು ಸಾಕಾನೆ ಕ್ರಷ್ಣನಿಗೆ ಸಣ್ಣನೋವಾದರೂ ಮಾವುತ ಕ್ರಷ್ಣನ ಮಾತಿಗೆಬಿಡದೆ ಪುಂಡಾನೆಯನ್ನು ಲಾರಿಗೆ ಏರಿಸಿದನು. ಲಾರಿಯ ಸುತ್ತಲೂ ಹಗ್ಗದಲ್ಲಿಕಟ್ಟಿ ಸಂಜೆ 4.30ಕ್ಕೆ ಶುಂಠಿಕೊಪ್ಪ,ಸಿದ್ದಾಪುರ, ಮಾಲ್ದಾರೆ ಮಾರ್ಗವಾಗಿ ದುಬಾರೆ ಆನೆ ಶಿಬಿರಕ್ಕೆ ತರಲಾಯಿತು.

ಪುಂಡಾನೆ ಹೊತ್ತಲಾರಿ ರಾತ್ರಿ 9ಗಂಟೆಗೆ ದುಬಾರೆ ಸಾಕಾನೆ ಶಿಭಿರಕ್ಕೆ ತಲುಪಿದೆಯಾದರೂ ಸಾಕಾನೆಗಳನ್ನು ಹೊತ್ತುತರಲು ಅಧಿಕಾರಿಗಳು ಲಾರಿ ವ್ಯವಸ್ಥೆ ಮಾಡದರಿಂದ ಮೋದೂರಿನಿಂದ ದುಬಾರೆಯವರೆಗೆ ಸುಮಾರು 15ಕಿಮಿ ದೂರಸಾಕಾನೆಗಳು ಮಾವುತರು ಕಾವಾಡಿಗಳನ್ನು ಹೊತ್ತುಮಳೆಯಲ್ಲೆ ನಡೆದು ಬರಬೇಕಾದ ಪರಿಸ್ಥಿತಿಯಾಯಿತು.

ರಾತ್ರಿಯಿಂದ ಬೆಳಗಿನ ಜಾವ 3ಗಂಟೆಯ ವರೆಗೆ ಪುಂಡಾನೆಯನ್ನು ಲಾರಿಯಿಂದ ಇಳಿಸಿ ಎಳೆದು ತಂದುಮರದ ದಿಮ್ಮಿಗಳ ಸ್ಕ್ರಾಲ್ ನೊಳಕ್ಕೆ ಸೇರಿಸಿ ಬಂಧಿಸಲಾಯಿತು.
ಸುಂಠಿಕೊಪ್ಪ ಸಮೀಪ ಮೋದೂರಿನಲ್ಲಿ ಒಂದುವಾರದ ಹಿಂದೆತೋಟದ ರೈಟರ್‍ನನ್ನು ದಾಳಿ ಮಾಡಲು ಮುಂದಾಗಿದ್ದು ಹಾಗು ಕಾರ್ಮಿಕರು ಹಾಗು ಸಾರ್ವಜನಿಕರಒತ್ತಾದ ಮೇರೆ ಅರಣ್ಯಇಲಾಖೆ ಪುಂಡಾನೆಯನ್ನು ಸಫಲರಾದರಿಂದ ಸಾರ್ವಜನಿಕರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಭಿನಂದಿಸಿ ಇನ್ನುಳಿದ ಕಾಡಾನೆಯನ್ನು ಬಂಧಿಸುವಂತೆ ಒತ್ತಾಯಿಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *