ಬ್ರೇಕಿಂಗ್ ನ್ಯೂಸ್
ಮಳೆ ಹಾನಿ ನಿಖರ ಮಾಹಿತಿ ಒದಗಿಸಲು ಪಿ.ಐ.ಶ್ರೀವಿದ್ಯಾ ಸೂಚನೆ , ಜುಲೈ 19 ರಂದು ಮಡಿಕೇರಿಗೆ ಮುಖ್ಯಮಂತ್ರಿ ಭೇಟಿ ಸಾ.ರಾ.ಮಹೇಶ್ , ಜು.19 ರಂದು ಕೊಡಗು ಜಿಲ್ಲೆಗೆ ಕುಮಾರ ಸ್ವಾಮಿ – ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂಕೇತ್ , ದಿನೇಶ್ ಗುಂಡುರಾವ್‍ಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಅಭಿನಂದನೆ , ಕೊಡಗಿನ ಧ್ವನಿಯಾದ ಫತ್ತಾಹ್ ಸಾಮಾಜಿಕ ಕಳಕಳಿ ಶ್ಲಾಘನಾರ್ಹ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮೆಚ್ಚುಗೆ , ಸುಂದರನಗರ ಬಳಿ ಪಂಚಾಯಿತಿ ವತಿಯಿಂದ ಚರಂಡಿ ಸ್ವಚ್ಚತಾ ಕಾರ್ಯಕ್ರಮ , ಸಧ್ಯದಲ್ಲಿಯೇ ಕೊಡಗಿಗೆ ಭೇಟಿ ಕೊಡವ ಸಾಹಿತ್ಯ ಅಕಾಡೆಮಿ ನಿಯೋಗಕ್ಕೆ ಸಿಎಂ ಭರವಸೆ , ಶಿಕ್ಷಕಿ ಲಾಸ್ಯ ತೇಜಸ್ವಿ ಮರಣ ಪ್ರಕರಣ – ಸಂಘ ಸಂಸ್ಥೆಗಳಿಂದ ಪ್ರತಿಭಟನೆ , ಪ್ರವಾಸಿ ಸ್ಥಳಗಳಿಗೆ ಬಸ್ ಸೌಲಭ್ಯ ಕಲ್ಪಿಸಿ ಸುನಿಲ್ ಸುಬ್ರಮಣಿ , ಮೈಸೂರು-ತಲಚೇರಿ ರೈಲ್ವೆ ಮಾರ್ಗ ಸ್ಥಗಿತಕ್ಕೆ ಸುನಿಲ್ ಸುಬ್ರಮಣಿ ಒತ್ತಾಯ ,

ವಿಧಾನ ಸಭಾ ಚುನಾವಣೆ ಮತ್ತೊಮ್ಮೆ ಬಿಜಿಪಿಗೆ ಜೈ ಎಂದ ಜಿಲ್ಲೆಯ ಜನ ಎರಡು ಕ್ಷೇತ್ರದಲ್ಲೂ ಅರಳಿದ ಕಮಲ

Posted on: May 15, 2018

bjp-karnatakaಮಡಿಕೇರಿ : ರಾಜ್ಯ ವಿಧಾನ ಸಭಾ ಚುನಾವಣಾ ಅಖಾಡದಲ್ಲಿ ಮತ್ತೊಮ್ಮೆ ಅರಳಿದ ಕಮಲ. ಕೊಡಗು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಸ್ಪೀಕರ್ ಆದಂತಹ ಕೆ.ಜಿ ಬೊಪ್ಪಯ್ಯ  ಭರ್ಜರಿ ಗೆಲುವು ಸಾಧಿಸುವ ಮೂಲಕ ೩ನೇ  ಬಾರಿ ವಿಧಾನ ಸಭೆಗೆ ಆಯ್ಕೆಗೊಂಡಿದ್ದಾರೆ.11

ರೇಸಿನಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಎರಡನೇ ಸ್ಥಾನಕ್ಕೆ ಹಾಗೂ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

29497331_162203384479775_8683385516923551744_nಮತ್ತೊಂದು ಪ್ರತಿಷ್ಠಿತ ಕ್ಷೇತ್ರವಾಗಿರುವ ಮಡಿಕೇರಿಯಲ್ಲೂ ಕಮಲ ಅರಳಿದೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದಂತಹ ಅಪ್ಪಚ್ಚು ರಂಜನ್ ಸುಮಾರು ೧೬ ಸಾವಿರ ಮತಗಳ ಅಂತರದ ಗೆಲುವು ಸಾಧಿಸುವ ಮೂಲಕ ೫ನೇ ಬಾರಿಗೆ ಆಯ್ಕೆಗೊಂಡಿದ್ದು. ಜೆಡಿಎಸ್ ಅಭ್ಯರ್ಥಿ ಜೀವಿಜಯ ಅವರು ದ್ವಿತೀಯ ಹಾಗೂ ಕಾಂಗ್ರೆಸಿನ ಚಂದ್ರಕಲಾ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆ ಕಾರ್ಯಕರ್ತರ ವಿಜೋಯೋತ್ಸವ ಮುಗಿಲುಮುಟ್ಟಿದೆ.

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ :

  • ಕೆ.ಜಿ ಬೊಪ್ಪಯ್ಯ – ಬಿಜೆಪಿ –78457
  • ಸಿ.ಎಸ್.ಅರುಣ್ ಮಾಚಯ್ಯ ಕಾಂಗ್ರೆಸ್ –64800
  • ಸಂಕೇತ್ ಪೂವಯ್ಯ – ಜೆಡಿಎಸ್ –11321

ಮಡಿಕೇರಿ ವಿಧಾನ ಸಭಾ ಕ್ಷೇತ್ರ :

  • ಅಪ್ಪಚ್ಚು ರಂಜನ್ – ಬಿಜೆಪಿ –71308
  • ಬಿ.ಎ ಜೀವಿಜಯ – ಜೆಡಿಎಸ್ –54986
  • ಕೆ.ಪಿ. ಚಂದ್ರಕಲಾ – ಕಾಂಗ್ರೆಸ್ –3835932555728_377091646128042_4578622088872460288_n

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *