ಕುಶಾಲನಗರದ ಖಾಸಗಿ ರೆಸಾರ್ಟ್ ನಲ್ಲಿ ಬಾಣಸಿಗನ ಬರ್ಬರ ಹತ್ಯೆ

Posted on: June 12, 2018

purple-palms-resort-spa
ಮಡಿಕೇರಿ : ಕೊಡಗಿನ ಕುಶಾಲನಗರದಲ್ಲಿರುವ ಪರ್ಪಲ್ ಪಾಮ್ ಖಾಸಗಿ ರೆಸಾರ್ಟ್ ನಲ್ಲಿ ಬಾಣಸಿಗನನ್ನು ಬರ್ಬರ ಹತ್ಯೆ ಮಾಡಲಾದ ಘಟನೆ ನಡೆದಿದೆ.

ಚೆನ್ನಪ್ಪ (27) ಕೊಲೆಯಾದ ವ್ಯಕ್ತಿ ಈತ ಮೂಲತಃ ಹೆಚ್ ಡಿ ಕೋಟೆಯವನಾಗಿದ್ದು ರೆಸಾರ್ಟ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಇಬ್ಬರು ಅಡುಗೆ ಕೆಲಾಗಾರರು ಪರಾರಿಯಾಗಿದ್ದು. ಸಹೋದ್ಯೋಗಿಗಳಿಂದಲೇ ಕೊಲೆಯಾಗಿರಬಹುದೆಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಶ್ವಾನದಳ.ಎಸ್.ಪಿ ರಾಜೇಂದ್ರಪ್ರಸಾದ್ ಹಾಗೂ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.8374adaa-98b7-42b6-862b-81355cecc7f2

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *