ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

Posted on: June 12, 2018

WhatsApp Image 2018-06-12 at 8.19.29 PM
ನಾಪೋಕ್ಲು : ಸಮೀಪದ ಪೇರೂರು ಗ್ರಾಮದ ನಿವಾಸಿ ಮಚ್ಚುರ ಪವನ್ ಮಂದಣ್ಣ (67) ಈ ದಿನ ನಾಪೋಕ್ಲು ನಗರಕ್ಕೆ ಬಂದಿದ್ದ ಅವರು ಮದ್ಯಾಹ್ನ 3 ಗಂಟೆಗೆ ಮನೆಗೆ ತೆರಳಿದ್ದರು. ಈ ಸಮಯದಲ್ಲಿ ತನ್ನ ಮನೆಯಲ್ಲಿ ಒಂಟಿ ನಳಕೆ ಕೋವಿಯಿಂದ ಮುಖದ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭ ಮನೆಯಲ್ಲಿದ್ದ ಪತ್ನಿ, ಮಗ ಮತ್ತೀತರರು ಗಾಯಾಳನ್ನು ಕೂಡಲೇ ನಾಪೋಕ್ಲು ಆಸ್ಪತ್ರೆಗೆ ಕರೆ ತಂದಾಗ ಇಲ್ಲಿ ಯಾವುದೇ ವ್ಯವಸ್ಥೆಯಿಲ್ಲದಾಗ ಗಾಯಾಳನ್ನು ಮಡಿಕೇರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಈ ಸಂದರ್ಭ ಗಾಯಾಳುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿರುವುದಿಲ್ಲ. ಮೃತರು ಪತ್ನಿ ಒಬ್ಬ ಮಗಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.

ಮೃತರು ಈ ಹಿಂದೆಯೇ ಮರಣ ನಂತರ ತಮ್ಮ ದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಎಲ್ಲಾ ದಾಖಲಾತಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದ್ದು, ಮೃತರ ದೇಹವನ್ನು ಸಂರಕ್ಷಿಸಲು ಶಿತಲ ಕಿರಣ ಘಟಕದಲ್ಲಿ ಇಡಲಾಗಿದ್ದು ನಾಳೆ ಪೇರೂರು ಗ್ರಾಮದಲ್ಲಿ ಸಾರ್ವಜನಿಕ ದರ್ಶನ ನಂತರ ಆಸ್ಪತ್ರೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ. ಈ ಬಗ್ಗೆ ನಾಪೋಕ್ಲು ಪೋಲಿಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೃಗೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *