ಚಲಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಕಾರ್ಮಿಕ ಸಾವು

Posted on: June 19, 2018

WhatsApp Image 2018-06-19 at 5.29.28 PM   ಗೋಣಿಕೊಪ್ಪಲು : ಕೆಲಸ ಮುಗಿಸಿ ಮನೆಗೆ ತೆರೆಳುತ್ತಿದ್ದ ಸಂದರ್ಭ ಚಲಿಸುತ್ತಿದ್ದ ಟಾಟ ಎಸ್ ವಾಹನದ ಮೇಲೆ ಸಿಲ್ವರ್ ಮರ ಬಿದ್ದು ಕಾರ್ಮಿಕನೊರ್ವ ಸಾವನಪ್ಪಿದ್ದು, ಮೂರು ಜನರಿಗೆ ಗಂಭೀರ ಗಾಯಗಳಾದ ಘಟನೆ ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿ ಬಳಿ ನಡೆದಿದೆ.WhatsApp Image 2018-06-19 at 6.31.56 PM

ಅನುಗೋಡು ನಿವಾಸಿ ರಾಜು (35) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಪಾಲಿಬೆಟ್ಟ ಹೊಸಳ್ಳಿ ಎಂಬ ಜಾಗದಲ್ಲಿ ತೋಟ ಕೆಲಸ ಮುಗಿಸಿ ಅನುಗೋಡುವಿನ ತಮ್ಮ ಊರಿಗೆ ಟಾಟ ಎಸ್ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಸಿಲ್ವರ್ ಮರ ಬಿದ್ದು, ಸಾವನಪ್ಪಿದ್ದಾನೆ. ವಾಹನದಲ್ಲಿ ಸುಮಾರು 13 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಚಾಲಕನ ಸಮೀಪವೇ ಕುಳಿತ್ತಿದ್ದ ಇತನ ತಲೆಯ ಭಾಗಕ್ಕೆ ಮರ ಬಿದ್ದ ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಭಾಗದಲ್ಲಿ ಕುಳಿತ್ತಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಇವರು ದುಬಾರೆ ಎಸ್ಟೇಟ್‍ನ ಕಾರ್ಮಿಕರಾಗಿದ್ದು, ಅನುಗೋಡು ನಿವಾಸಿಗಳಾಗಿದ್ದಾರೆ.ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ. WhatsApp Image 2018-06-19 at 5.43.18 PMWhatsApp Image 2018-06-19 at 5.29.35 PM

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *