ಪೌರಕಾರ್ಮಿಕರಿಗೆ ಪ.ಪಂ ಅಧ್ಯಕ್ಷರಿಂದ ರೈನ್ ಕೋಟ್ ವಿತರಣೆ

Posted on: June 19, 2018
IMG-20180619-WA0035
ಕುಶಾಲನಗರ :  ಪೌರಕಾರ್ಮಿಕರಿಗೆ ಮಳೆಗಾಲದಲ್ಲಿ ಅವಶ್ಯಕವಾದ ಆರೋಗ್ಯ ಸಂರಕ್ಷಿತ ಕವಚಗಳನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾಜಗದೀಶ್ರವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡಿ ಪಟ್ಟಣದ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಡಾವಣೆಯನ್ನು  ಬಿಸಿಲು, ಮಳೆ, ಚಳಿ ಎನ್ನದೆ ಸ್ವಚ್ಛತೆಗೆ ಮುಂದಾಗುವ ನಮ್ಮ ಪೌರಕಾರ್ಮಿಕ ಆರೋಗ್ಯಯು ಬಹಳ ಮುಖ್ಯ. ಇದೀಗ ಮಳೆಗಾಲ ಪ್ರಾರಂಭವಾಗಿದ್ದು ಚರಂಡಿ, ಕಸ- ಕಡ್ಡಿಗಳು ಅತೀಯಾಗಿ ತುಂಬಿ ತುಳುಕುತ್ತಿರುತ್ತದೆ. ಅದನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಪರಿಕರಗಳು ಹಾಗೂ ರೈನ್ ಕೊರ್ಟ್  ಅವಶ್ಯಕವಾಗಿ ಬೇಕಾಗುತ್ತದೆ ಅದನ್ನು ಗಮನದಲ್ಲಿಟ್ಟುಕೊಂಡು  ಅವರ ಆರೋಗ್ಯದ ಮೇಲೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆ ನಮ್ಮದಾಗಿದೆ. ಪೌರ ಕಾರ್ಮಿಕರು ಆರೋಗ್ಯದಲ್ಲಿದ್ದಾರೆ ನಮ್ಮ ಪಟ್ಟಣ, ನಮ್ಮ ಊರಿನ ಜನರು ಕೂಡ ಆರೋಗ್ಯವಂತರಾಗಿರುತ್ತಾರೆ ಎಂದರು.
ಮಳೆಗಾಲ ಬಂದಾಗ ಸ್ವಚ್ಛತಾ ಕಾರ್ಯ ತೊಡುಗುವುದರಲ್ಲಿ ಅನೇಕ ತೊಂದರೆಗಳು ಎದುರಾಗುತ್ತದೆ. ಎಲ್ಲಿ ನೋಡಿದರು ಚರಂಡಿ ತುಂಬಿಕೊಂಡಿರುತ್ತದೆ, ಅವನ್ನೆಲ್ಲ ಸ್ವಚ್ಚಗೊಳಿಸಬೇಕಾದರೆ ನಮಗೆ ಯಾವುದೇ ತೊಂದರೆಗಳು ಅಗಾದಂತ ಕೈಚೀಲ, ಕಾಲಿಗೆ ಗಂಬೂಟ್, ರೈನ್ ಕೊರ್ಟ್ ಬಹಳ ಅವಶ್ಯಕ. ಇದನ್ನೂ ವಿತರಿಸಿದ ಅಧ್ಯಕ್ಷರಿಗೆ ಪೌರಕಾರ್ಮಿಕರು ಧಾನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಪ.ಪಂ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ  ಎಂ.ಎಂ.ಚರಣ್ , ಅಧಿಕಾರಿ ಸತೀಶ್ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *