ಪ್ರೇಯಸಿ ಸಾವಿನಿಂದ ಮನನೊಂದ ಪ್ರಿಯಕರ ನೇಣಿಗೆ ಶರಣು

Posted on: June 23, 2018

suicied 1
ಶ್ರೀರಂಗಪಟ್ಟಣ : ಪ್ರೇಯಸಿಯ ಸಾವಿನಿಂದ ಮನನೊಂದಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಮ್ ಗ್ರಾಮದ ಸಂತೋಷ್(19) ಮೃತ ಯುವಕ. ಗಂಜಾಮ್ ಗ್ರಾಮದಲ್ಲೇ ಯುವತಿಯೊಬ್ಬಳನ್ನು ಹಲವು ತಿಂಗಳಿನಿಂದ ಪ್ರೀತಿಸುತ್ತಿದ್ದ. ಆಕೆ ಅದ್ಯಾವುದೋ ಕಾರಣಕ್ಕೆ ಮೂರು ದಿನಗಳ ಹಿಂದೆ ಆಕೆಯ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಆಕೆಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಸಂತೋಷ್ ಗ್ರಾಮದ ಹೊರವಲಯದ ಪಾಳು ಮನೆಯೊಂದರಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *