ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಬಂದೂಕು, ಚಿನ್ನಾಭರಣಗಳ ಸಮೇತ ಇಬ್ಬರು ಖದೀಮರು ಮಡಿಕೇರಿ ಪೋಲೀಸರ ವಶಕ್ಕೆ

Posted on: June 4, 2018

31-1

ಮಡಿಕೇರಿ : ಬಂದೂಕು ಸಮೇತ ಇಬ್ಬರು ಖದೀಮರನ್ನು ಬಂಧಿಸಿದ ಮಡಿಕೇರಿ ಪೊಲೀಸರು ರೂ 2 ಲಕ್ಷ ಮೌಲ್ಯದ ಎರಡು ಬಂದೂಕು ಹಾಗೂ 34ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಕಕ್ಕಬೆ ಗ್ರಾಮದ ನಿವಾಸಿ ಕೆ ಸಿ ಅಶೋಕ್ ಹಾಗೂ ನಾಣಯ್ಯ ವಿಜು ಬಂಧಿತ ಆರೋಪಿಗಳು ಕಾಲೂರು ಗ್ರಮದ ಜಂಕ್ಷನ್ ಬಳಿ ಬಸ್ ತಂಗುದಾಣದಲ್ಲಿ ಸಂಶಯಾಸ್ಪದ ವಾಗಿ ಬಂದೂಕು ಹಿಡಿದು ನಿಂತಿದ್ದ ಅಶೋಕನನ್ನು ಸುತ್ತುವರೆದು ಸೆರೆಹಿಡಿದ ಪೊಲೀಸರು ವಿಚಾರಣೆ ನಡೆಸಿದಾಗ ಮಡಿಕೇರಿಯ ಓಂಕಾರೇಶ್ವರ ದೇವಾಲಯದ ಬಳಿಯ ಮನೆಯೊಂದರಿಂದ ಎರಡು ಬಂದೂಕು ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತೊಬ್ಬ ಆರೋಪಿ ನಾಣಯ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಭಾನುವಾರ ಬೆಳಗಿನ ಜಾವ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಎನ್ ಯತೀಶ್ ,ಮಡಿಕೇರಿ ಗ್ರಾಮಾಂತರ ವೃತ ನಿರೀಕ್ಷಕ ಹೆಚ್.ಏನ್ ಸಿದ್ದಯ್ಯ ,ಪಿಎಸ್ಐ ಚೇತನ್ ಹಾಗು ಸಿಬ್ಬಂದಿಗಳು ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ ಗಾಳಿಬಿಡು  ಕಾಲೂರು ಕಡೆ ಹೋಗುವ ಜಂಕ್ಷನ್ ಬಳಿ ಬಸ್ ತಂಗುದಾಣದಲ್ಲಿ ಕೈಯಲ್ಲಿ ಬಂದೂಕು ಹಿಡಿದು ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ಹೋದಳು ಯತ್ನಿಸಿದ ಎನ್ನಲಾಗಿದ್ದು

ಕೂಡಲೇ ಆತನನ್ನು ಸುತ್ತುವರೆದ ಪೊಲೀಸರು ಸೆರೆಹಿಡಿದು ವಿಚಾರಿಸಿದಾಗ ಆತ ಬಂದೂಕಿನ ಯಾವುದೇ ದಾಖಲೆ ಇಲ್ಲವೆಂದು ತಿಳಿದನೆಂದು ಹೇಳಲಾಗಿದ್ದು ಇದರೊಂದಿಗೆ ಆತ ಕಳೆದ ತಿಂಗಳ ಹಿಂದೆ ಮಡಿಕೇರಿ ನಗರದ ಓಂಕಾರೇಶ್ವರ ದೇವಾಲಯದ ಬಳಿ ಇರುವ ಮನೆಯಿಂದ ರಾತ್ರಿ ಸಮಯದ್ಲಲಿ ಕಳ್ಳತನ ಮಾಡಿರುದಾಗಿಯೂ ಈ ಬಂದೂಕಿನೊಂದಿಗೆ ಇನ್ನೊಂದು ಡಬಲ್ ಬ್ಯಾರಲ್ ಬಂದೂಕು ಹಾಗೂ ಚಿನ್ನಾಭರಣವನ್ನು ಕಳವು ಮಾಡಿರುವುದಾಗಿಯೂ ತಿಳಿಸಿದ್ದು.

ಕದ್ದ ಚಿನ್ನಾಭರಣವನ್ನು ಮಡಿಕೇರಿ ಹಾಗೂ ವಿರಾಜಪೇಟೆಯ ಚಿನ್ನಾಭರಣ ಮಳಿಗೆಗಳಲ್ಲಿ ಮಾರಾಟ ಮಾಡಿದ್ದೂ ಈ ಬಂದೂಕನ್ನು ಕೂಡಾ ಯಾರಿಗಾದರೂ ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿದುದಾಗಿ ತಿಳಿಸಿದ್ದಾನೆ ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ ರಾಜೇಂದ್ರ ಪ್ರಸಾದ್ ಅವರ ನಿರ್ದೇಶನದಂತೆ ಮಡಿಕೇರಿ ಉಪ ಅಧೀಕ್ಷಕ ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ ನಿರೀಕ್ಷಕ ಸಿದ್ದಯ್ಯ, ಠಾಣಾಧಿಕಾರಿ ಯತೀಶ್, ಉಪ ನಿರೀಕ್ಷಕ ಚೇತನ್ ಸಿಬಂದಿಗಳಾದ ಇಬ್ರಾಹಿಂ, ಸತೀಶ್, ತೀರ್ಥಕುಮಾರ್, ಶಿವರಾಜಗೌಡ, ಕನ್ನಿಕಾ, ಸುಧಾಮಣಿ ಚಾಲಕರಾದ ಸುನಿಲ್, ಅನಿಲ್ ಅವರುಗಳು  ತಂಡ ರಚಿಸಿ ತನಿಖೆ ಮುಂದುವರಿಸಿದಾಗ ಆರೋಪಿ ಅಶೋಕ್ ಮತ್ತು ನಾಣಯ್ಯ ಅಲಿಯಾಸ್ ವಿಜು ಅವರನ್ನು ವಶಕ್ಕೆ ಪಡೆದುಕೊಂಡು.  ಸುಮಾರು 2 ಲಕ್ಷ ಮಲ್ಯಾಡಿ ಬಂದೂಕು ಹಾಗು 34 ಗ್ರಾಂ ಚಿನ್ನಾಭರಣ  ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್  ಬಹುಮಾನವನ್ನು ಘೋಷಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *