ಭಾರತ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಆಫ್ಘಾನಿಸ್ತಾನ

Posted on: June 14, 2018

 

during day one of the tour match between England Lions and Afghanistan at Zayed Cricket Stadium  on December 7, 2016 in Abu Dhabi, United Arab Emirates.

ಬೆಂಗಳೂರು : ಕಳೆದ ಕೆಲ ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನದಿಂದ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿರುವ ಅಫ್ಘಾನಿಸ್ತಾನ ಕ್ರಿಕೆಟ್​ ತಂಡವು ಈವರೆಗಿನ ಅತ್ಯಂತ ಕಠಿಣ ಸವಾಲು ಎದುರಿಸಲಿದೆ.

ಆಫ್ಘಾನಿಸ್ತಾನ ತಂಡ ಇವತ್ತು ಭಾರತ ವಿರುದ್ಧದ ಬೆಂಗಳೂರಿನ ಏಕೈಕ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ್ದು, ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ನಿಯಮಿತ ಕ್ಯಾಪ್ಟನ್​ ವಿರಾಟ್​ ಕೊಹ್ಲಿಯ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ.ajyanke

ಅಫ್ಘಾನಿಸ್ತಾನದ ಬಲಿಷ್ಠ ಬೌಲಿಂಗ್: ಈ ಪಂದ್ಯವು ಭಾರತದ ಬ್ಯಾಟಿಂಗ್​ ಹಾಗೂ ಅಫ್ಘಾನಿಸ್ತಾನದ ಆಕ್ರಮಣಕಾರಿ ಸ್ಪಿನ್​ ನಡುವಿನ ಕದನವೆಂದರು ತಪ್ಪಾಗಲಾರದು. ಅಫ್ಘಾನಿಸ್ತಾನವು ಈ ಪಂದ್ಯದಲ್ಲಿ ರಶಿದ್ ಖಾನ್, ಮುಜೀರ್​ ಉರ್​ ರಹಮಾನ್, ಜಹೀರ್​ ಖಾನ್ ಹಾಗೂ ಹಂಜಾ ಕೋಟಕ್​ರಂತಹ ಸ್ಪಿನ್​ ಬೌಲರ್​ಗಳನ್ನು ತಂಡದಲ್ಲಿಟ್ಟುಕೊಂಡಿದೆ. ಈ ನಾಲ್ವರನ್ನು ಹೊರತುಪಡಿಸಿ ಮೊಹಮ್ಮದ್ ನಬಿ ತಂಡದಲ್ಲಿರುವ ಐದನೇ ಸ್ಪಿನ್ನರ್ ಆಗಿದ್ದಾರೆ. ಈ ಮೊದಲು ಭಾರತವು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್​ ಸಿರೀಸ್​ನಲ್ಲಿ ಭಾಗವಹಿಸಿ ಸೋಲನುಭವಿಸಿತ್ತು. ಇದಾದ ಬಳಿಕ ಭಾರತೀಯ ಕ್ರಿಕೆಟ್​ ತಂಡವು ಇನ್ಯಾವುದೇ ಟೆಸ್ಟ್ ಪಂದ್ಯ ಆಡಲಿಲ್ಲ.
ತಂಡಗಳು:

ಭಾರತ(ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ್ ಪುಜಾರಾ, ಲೋಕೇಶ್ ರಾಹುಲ್, ಅಜಿಂಕ್ಯಾ ರಹಾನೆ(ನಾಯಕ), ದಿನೇಶ್ ಕಾರ್ತಿಕ್(ವಿಕೆಟ್​ ಕೀಪರ್), ಹಾರ್ದಿಕ್ ಪಾಂಡ್ಯಾ, ರವಿಚಂದ್ರನ್​ ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಉಮೇಶ್ ಯಾದವ್

ಅಫ್ಘಾನಿಸ್ತಾನ: (ಪ್ಲೇಯಿಂಗ್ ಇಲೆವೆನ್): ಮೊಹಮ್ಮದ್ ಶಹಜಾದ್, ಜಾವೆದ್ ಅಹ್ಮದಿ, ರಹಮತ್​ ಷಾ, ಅಸ್ಗರ್ ಸ್ಟಾನಿಕಜಾಯ್(ನಾಯಕ), ಅಫ್ಜರ್ ಜಜಾಯ್(ವಿಕೆಟ್ ಕೀಪರ್), ಮೊಹಮ್ಮದ್ ನಬಿ, ಹಷಮತುಲ್ಲಾ ಶಾಹಿದಿ, ರಸೀಧ್ ಖಾನ್, ಮುಜೀಬ್ ಉರ್ ರಹಮಾನ್, ಯಾಮಿನ್ ಅಹ್ಮದ್ ಜಾಯ್, ವಫಾದಾರ್

ಒಟ್ಟಾರೆಯಾಗಿ ವಿಶ್ವದ ನಂಬರ್​ 1 ತಂಡ, ಟೀಂ ಇಂಡಿಯಾ ಹಾಗೂ ಅಂತರಾಷ್ಟ್ರೀಯ ಮಟ್ಟದ ತನ್ನ ಮೊದಲ ಟೆಸ್ಟ್​ ಪಂದ್ಯವನ್ನಾಡುತ್ತಿರುವ ಅಫ್ಘಾನಿಸ್ತಾನ ನಡುವಿನ ಕಾದಾಟ ವಿಶ್ವದ ಗಮನಸೆಳೆದಿದೆ. ಈ ಐತಿಹಾಸಿಕ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *