ಮಹಾಮಳೆಗೆ ಕರ್ನಾಟಕ-ಕೇರಳ ಗಡಿಯಲ್ಲಿ ಭಾರೀ ಭೂಕುಸಿತ ವಾಹನ ಸಂಚಾರ ಸ್ಥಗಿತ

Posted on: June 13, 2018

  Z-MAKUTTA-5ಮಡಿಕೇರಿ : ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಗೆ ಕರ್ನಾಟಕ ಹಾಗೂ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಡಗಿನ ಗಡಿಭಾಗ ಮಾಕುಟ್ಟ ವ್ಯಾಪ್ತಿಯಲ್ಲಿ ಭೂಕುಸಿತ ಏರ್ಪಟ್ಟಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.

ನಿನ್ನೆ ತಡರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ಘಟನೆ ನಡೆದಿದ್ದು, ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಎತ್ತರದ ಪ್ರದೇಶದ ಹಲವು ಮರಗಳು ರಸ್ತೆಗೆ ಉರುಳಿದ್ದು, ವಿರಾಜಪೇಟೆಯ ಪೆರುಂಬಾಡಿ ಚೆಕ್ ಪೋಸ್ಟ್ ನಿಂದ ಮಾಕುಟ್ಟ ಗಡಿಯ ವರೆಗೆ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ. ಇದರಿಂದ ಅರಣ್ಯ ಭಾಗದ ರಸ್ತೆಯಲ್ಲಿ ಹಲವು ವಾಹನಗಳು ಸಿಲುಕಿಕೊಂಡಿದ್ದವು.Z-MAKUTTA-4

ಎತ್ತರವಾದ ಬೆಟ್ಟಗುಡ್ಡಗಳಿಂದ ನೀರು ಸರಾಗವಾಗಿ ಹರಿದು ಬರುತ್ತಿದ್ದು ಗುಡಿಸಲುಗಳು ನಿರುಪಾಲಾಗಿವೆ ಅಲ್ಲದೆ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದೆ. ಲೋಕೋಪಯೋಗಿ ಇಲಾಖೆ,ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಭೂಕುಸಿತವಾದ ಪ್ರದೇಶ ಹಾಗೂ ರಸ್ತೆಗೆ ಉರುಳಿರುವ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಹಾರ ಒದಗಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಸೂಚಿಸಿದ್ದಾರೆ.

ಅಲ್ಲದೆ ಕಣ್ಣ್ಣನೂರು – ತಲಚೇರಿಗಳಿಂದ ವಿರಾಜಪೇಟೆ ಮಾರ್ಗವಾಗಿ ಮೈಸೂರು -ಬೆಂಗಳೂರು ಸಾಗುವ ವಾಹನಗಳಿಗೆ ಇರಿಟ್ಟಿ -ಮಾನಂದವಾಡಿ -ಕುಟ್ಟ -ಗೋಣಿಕೊಪ್ಪ ಮಾರ್ಗವಾಗಿ ಸಾಗಲು ಅನುಕೂಲ ಮಾಡಲಾಗಿದೆ.Z-MAKUTTA-1

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *