ಮಾಲ್ದಾರೆ ಕಲ್ಲಳ-ಸೀದ್ವೇಶ್ವರ ಬೆಟ್ಟದ ತಪ್ಪಲುಗಳಲ್ಲಿ ಸಸಿ ನೆಡುವ ಕಾಯ೯ಕ್ರಮ

Posted on: June 21, 2018

WhatsApp Image 2018-06-20 at 8.16.32 PM
ಸಿದ್ದಾಪುರ : ಸಮೀಪದ ಮಾಲ್ದಾರೆ ಕಲ್ಲಳ-ಸೀದ್ವೇಶ್ವರ ಬೆಟ್ಟದ ತಪ್ಪಲುಗಳಲ್ಲಿ ಸಸಿ ನೆಡುವ ಕಾಯ೯ಕ್ರಮವನ್ನು ಏಪ೯ಡಿಸಲಾಗಿತ್ತು. ಕಳೆದ ಬೇಸಿಗೆಯಲ್ಲಿ ಭೀಕರವಾಗಿ ಕಾಡ್ಗಿಚ್ಚಿಗೆ ಆಹುತಿಯಾಗಿ ಬೋಳಾಗಿದ್ದ ಈ ಪ್ರದೇಶದಲ್ಲಿ ಸಸಿನೆಡುವ ಪ್ರಯಾಸಕರ ಕಾಯ೯ಕ್ರಮದಿಂದ ಈ ಪ್ರದೇಶದಲ್ಲಿನ ಪುನ:ಹಸಿರು ಛಾಯೆ ಮೂಡಲಿದೆ.

ಈ ಕಾಯ೯ಕ್ರಮದಲ್ಲಿ ಫಲ ಪುಷ್ಬ ಬಿಡುವ ನೇರಳೆ. ಅತ್ತಿ. ಹಲಸು. ಮಾವು .ಹುಣಸೆ .ಸಂಪಿಗೆ.ಬೇವು. ಹಾಗೂ ಇನ್ನಿತರ ಪ್ರಭೇದಗಳಿಗೆ ಸೇರಿದ ಮನುಷ್ಯನಿಗೂ ಪ್ರಾಣಿಗಳಿಗೂ ಉಪಯೋಗವಾಗುವಂತಹ ಸುಮಾರು ಇನ್ನೂರುಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಈ ಗಿಡಗಳೆಲ್ಲವನ್ನು ಸ್ದಳೀಯ ವ್ರಕ್ಷಪೇಮಿ ಹಾಗೂ ಪರಿಸರವಾದಿ ಶೀ ಮಂಡೇಪಂಡ ಚಂಗಪ್ಪ(ಶೀ ಪಟ್ಟುರವರ ಪುತ್ರ) ರವರು ಉಚಿತವಾಗಿ ವಿತರಿಸಿದರು ಹಾಗೂ ಗಿಡನೆಡುವ ಕಾಯ೯ಕ್ರಮದಲ್ಲೂ ಭಾಗವಹಿಸಿದ್ದರು

ಈ ಕಾಯ೯ಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದ್ಯಸರಾದ ಕರುಂಬಯ್ಯ(ರಘು) ಮಾಲ್ದಾರೆಯ ಜನಪರ ಸಂಘಟಣೆಯ ಅದ್ಯಕ್ಷರು ಹಾಗೂ ಸದ್ಯಸರು ಹಾಗೂ ಪರಿಸರವಾದಿಗಳಾದ ರಮೇಶ್. ಸುರೇಶ್.ಪ್ರವೀಣ್.ದುಗ್ಗಪ್ಪ.ಅನೀಶ್.ಮುಂತಾದವರು ಪಾಲ್ಗೊಂಡಿದ್ದರು. WhatsApp Image 2018-06-20 at 8.16.37 PMWhatsApp Image 2018-06-20 at 8.16.39 PM

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *