ರೈತರ ಸಾಲ ಎಷ್ಟು ಕೋಟಿ ಇದ್ದರೂ ಸರಿ ಸಾಲ ಮನ್ನಾ ಮಾಡಿಯೇ ತೀರುತ್ತೇನೆ ಸಿಎಂ ಕುಮಾರಸ್ವಾಮಿ

Posted on: June 19, 2018

Kumaraswamy hd
ಬೆಂಗಳೂರು :  ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದರೆ ಸಾಲ ಮನ್ನ ಮಾಡುತ್ತೇನೆ ಎಂದು ನಾನು ಹೇಳಿದ್ದೆ. ಆದರೆ ನಮ್ಮ ಪಕ್ಷಕ್ಕೆ ಬಹುಮತ ಬಂದಿಲ್ಲ. ಕಾಂಗ್ರೆಸ್ ಜತೆಗೆ ಕೂಡಿ ಸರಕಾರ ಮಾಡಿದ್ದೇನೆ. ಆದರೂ ನಾನು ಸಾಲಾ ಮನ್ನಾ ಮಾತಿಗೆ ಬದ್ಧನಾಗಿದ್ದು, ರೈತರ ಸಾಲ ಎಷ್ಟು ಕೋಟಿ ಇದ್ದರೂ ಸರಿಯೇ ಮನ್ನಾ ಮಾಡಿಯೇ ತೀರುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಅವರು ಇಲ್ಲಿನ ಪ್ರೆಸ್ ಕ್ಲಬ್‍‍ನಲ್ಲಿ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ನಡೆಸಿದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ಕೆಲವರು ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ನಾನು ಅಧಿಕಾರ ಸ್ವೀಕರಿಸಿ 27 ದಿನಗಳಾಗಿದ್ದು ಇನ್ನೂ ಸರಿಯಾಗಿ ಉಸಿರಾಡಲು ಸಮಯ ಸಿಕ್ಕಿಲ್ಲ. ಇನ್ನೆರಡು ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ಹೇಳಿದರು.

ಮೊನ್ನೆ ನೀತಿ ಆಯೋಗದ ಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಾಲ ಮನ್ನಾ ಮಾಡಲು ನೆರವು ಕೋರಿದ್ದೇನೆ. ರೈತರ ಸಾಲ ಮನ್ನಾ ಮಾಡಲು ಅನಗತ್ಯ ಕರ್ಚುಗಳನ್ನು ಕಡಿಮೆ ಮಾಡಿದ್ದು, ಸೋರಿಕೆಯಾಗುತ್ತಿರುವುದನ್ನು ತಡೆಯುತ್ತೇನೆ. ರಾಜ್ಯದ ರೈತರಿಗೆ ಹೊರೆಯಾಗದಂತೆ ಸಾಲ ಮನ್ನಾ ಮಾಡುತ್ತೇನೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *