ವಿಶ್ವ ದಾಖಲೆಯತ್ತ ಯೋಗ ಗುರು ಬಾಬಾ ರಾಮ್​ದೇವ್

Posted on: June 21, 2018

ramdev
ಜೈಪುರ : ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಆರ್​ಎಸಿ ಗ್ರೌಂಡ್ಸ್​ನಲ್ಲಿ ಯೋಗಗುರು ಬಾಬಾ ರಾಮ್​ದೇವ್​ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂದರಾ ರಾಜೆ ನೇತೃತ್ವದಲ್ಲಿ ನಡೆಯುತ್ತಿರುವ ಯೋಗ ಕಾರ್ಯಕ್ರಮ ವಿಶ್ವ ದಾಖಲೆ ಮಾಡುವತ್ತ ದಾಪುಗಾಲಿಟ್ಟಿದೆ.

ರಾಜಸ್ಥಾನದ ಕೋಟಾದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿರುವುದು ವಿಶ್ವ ದಾಖಲೆಯಾಗುವ ಎಲ್ಲ ಮುನ್ಸೂಚನೆ ನೀಡಿದೆ.

ಈ ಬೃಹತ್​ ಕಾರ್ಯಕ್ರಮಕ್ಕೆ ಎರಡು ದಿನಗಳ ಹಿಂದೆಯೇ ಕೋಟಾಕ್ಕೆ ಬಂದಿದ್ದ ರಾಮ್​ದೇವ್​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ತರಬೇತಿ ನೀಡಿದ್ದರು.

ವಿಶ್ವ ದಾಖಲೆಗಳ ತಂಡ ಕಾರ್ಯಕ್ರಮವನ್ನು ಪರಿಶೀಲಿಸಲು ಕೋಟಾಕ್ಕೆ ಬಂದಿದ್ದಾರೆ. ಒಂದೇ ಜಾಗದಲ್ಲಿ ಅತಿ ಹೆಚ್ಚು ಜನರನ್ನು ಸೇರಿಸಿ ಯೋಗ ಮಾಡಿ ವಿಶ್ವ ದಾಖಲೆಗೆ ಮುಂದಾಗಿದ್ದೇವೆ. ಸುಮಾರು ಎರಡು ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಭರವಸೆಯಲ್ಲಿದ್ದೇವೆ ಎಂದು ರಾಜಸ್ಥಾನದ ಆರೋಗ್ಯ ಸಚಿವ ಕಾಳಿಚರಣ್​ ಸರಫ್​ ತಿಳಿಸಿದ್ದಾರೆ.

ಕಳೆದ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದಂದು ಮೈಸೂರಿನಲ್ಲಿ 55,000 ಜನ ಸೇರಿ ಯೋಗ ಮಾಡುವ ಮೂಲಕ ದಾಖಲೆ ಮಾಡಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *