ಶ್ರೀಗಂಧ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ

Posted on: June 5, 2018

 

0a184743-1cf6-47b8-842b-15076c6f0362ಮಡಿಕೇರಿ : ಶ್ರೀ ಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ತಾಲೂಕಿನ ಕುಂಟಾರು ಗ್ರಾಮದ ನಿವಾಸಿ ಸಂಶುದ್ದೀನ್ ಎಂಬಾತ ಬೋಯಿಕೇರಿ ಬಸ್ ನಿಲ್ದಾಣದ ಬಳಿ ಒಂದು ಚೀಲದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ತುಂಬಿಕೊಂಡು ಮಾರಾಟ ಮಾಡಲು ಹೊಂಚುಹಾಕುತ್ತಿದ್ದ ಸಂದರ್ಭ ಧಾಳಿ ನಡೆಸಿದ ಪೊಲೀಸರು ಆರೋಪಿಸಿ ಸಂಶುದ್ದೀನ್ ನನ್ನು ಬಂಧಿಸಿ ಆತನಿಂದ ೫೦ಸಾವಿರ ಬೆಲೆಬಾಳುವ ೧೦ಕೆಜಿ ಯಷ್ಟು ತೂಕದ ೨೪ ಶ್ರೀಗಂಧದ ಮರದ ತೊಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ರವರ ನಿರ್ದೇಶನದಲ್ಲಿ ಡಿವೈಎಸ್ಪಿ ಸುಂದರರಾಜ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ ನಿರೀಕ್ಷಕ ಸಿದ್ದಯ್ಯ, ಪ್ರೊಬೆಷನರಿ ಎಸ್ಪಿ ಯತೀಶ್ , ಉಪ ನಿರೀಕ್ಷಕ ಚೇತನ್ ,ಸಿಬಂದಿಗಳಾದ ತೀರ್ಥಕುಮಾರ್, ಇಬ್ರಾಹಿಂ,ಸತೀಶ್, ಶಿವರಾಜೇಗೌಡ, ಸುಧಾಮಣಿ, ಚಾಲಕ ಅರುಣ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *