ಸಮುದಾಯ ನಾಯಕತ್ವ ವಹಿಸುವಷ್ಟು ಅರ್ಹರಲ್ಲ ಜಮೀರ್, ಖಾದರ್ – ತನ್ವೀರ್​ ಸೇಠ್​ ಕಿಡಿ

Posted on: June 14, 2018

tanvirಬೆಂಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯ ನಾಯಕತ್ವ ಮುಗಿಸುವ ಕೆಲಸ ನಡೆಯುತ್ತಿದ್ದು, ನಮ್ಮ‌ ಸಮುದಾಯದ ಅರ್ಹರಲ್ಲದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಮಾಜಿ ಸಚಿವ ತನ್ವೀರ್​ ಸೇಠ್​ ಪಕ್ಷದ ವಿರುದ್ಧ ಕಿಡಿಕಾರಿದರು.

ವೇಣುಗೋಪಾಲ್ ಭೇಟಿ ಬಳಿಕ ಮಾತನಾಡಿದ ಅವರು ಯು.ಟಿ. ಖಾದರ್ ಮತ್ತು ಜಮೀರ್​ ಅಹಮದ್​ಗೆ ನಮ್ಮ‌ಸಮುದಾಯ ಪ್ರತಿನಿಧಿಸುವ ನಾಯಕತ್ವ ಗುಣ ಇಲ್ಲ. ಜಮೀರ್ ನನ್ನ ಸೋಲಿಗೆ ಪ್ರಯತ್ನ ಮಾಡಿದವರು. ಬೇರೆ ಕಡೆಯಿಂದ ಬಂದ ಅವರಿಗೆ ಮಣೆ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಬಗ್ಗೆ ವೇಣುಗೋಪಾಲ್ ಹಾಗೂ ವರಿಷ್ಠರ ಗಮನಕ್ಕೂ ತಂದಿದ್ದೇನೆ. ನನ್ನ ವಿರುದ್ಧ ಕೆಲಸ ಮಾಡಿದ್ದ ಬಗ್ಗೆ ದೂರು ಹೇಳಿದ್ದೇನೆ. ಸಮುದಾಯ ನಾಯಕತ್ವ ವಹಿಸುವಷ್ಟು ಜಮೀರ್ ಮತ್ತು ಖಾದರ್ ಅರ್ಹರಲ್ಲ ಎಂದು ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *