ಪ್ರವಾಸಿ ಸ್ಥಳಗಳಿಗೆ ಬಸ್ ಸೌಲಭ್ಯ ಕಲ್ಪಿಸಿ ಸುನಿಲ್ ಸುಬ್ರಮಣಿ

Posted on: July 11, 2018

abbey fal
ಮಡಿಕೇರಿ : ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ ಅವರು ವಿಧಾನ ಪರಿಷತ್‍ನಲ್ಲಿ ಸೋಮವಾರ ಹಲವು ಪ್ರಶ್ನೆಗಳನ್ನು ಕೇಳಿ ಗಮನ ಸೆಳೆದಿದ್ದಾರೆ.

ಕೊಡಗು ಜಿಲ್ಲೆಯಲ್ಲಿರುವ ಪ್ರವಾಸೋದ್ಯಮ, ಪ್ರವಾಸಿ ಸ್ಥಳಗಳಾದ ಶ್ರೀ ಕ್ಷೇತ್ರ ತಲಕಾವೇರಿ, ಅಬ್ಬಿಫಾಲ್ಸ್, ಇರ್ಪು ಫಾಲ್ಸ್, ನಾಗರಹೊಳೆ, ದುಬಾರೆ, ಚೇಲಾವರ ಫಾಲ್ಸ್ ಮತ್ತು ನಾಲ್ಕು ನಾಡು ಅರಮನೆ ಮುಂತಾದ ಸ್ಥಳಗಳಿಗೆ ಹೋಗಲು ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆಯೇ? ಎಂಬ ಪ್ರಶ್ನೆಗೆ ಕೊಡಗು ಜಿಲ್ಲೆಯಲ್ಲಿ ಹಾದುಹೋಗುವ ಹುಣಸೂರು-ಮಡಿಕೇರಿ-ಪುತ್ತೂರು-ಮಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಹೊರಪಡಿಸಿದಲ್ಲಿ, ಜಿಲ್ಲೆಯ ಇನ್ನಿತರೆ ಎಲ್ಲಾ ಮಾರ್ಗಗಳು ರಾಷ್ಟ್ರೀಕೃತವಾಗದ ವಲಯದಲ್ಲಿರುತ್ತವೆ,
ನಿಗಮದ ಸಾರಿಗೆಗಳ ಕಾರ್ಯಾಚರಣೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಪ್ರಯಾಣಿಕರು ಮತ್ತು ಶಾಲಾ/ ಕಾಲೇಜಿನ ವಿದ್ಯಾರ್ಥಿಗಳ ದೈನಂದಿನ ಸಾರಿಗೆ ಅವಶ್ಯಕತೆಯನ್ನು ಮತ್ತು ಒತ್ತಡವನ್ನು ಗಮನಿಸಿ, ಸಾರಿಗೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ, ಅದರಂತೆ ಸಾರಿಗೆ ನಿರ್ವಹಣೆಯ ಮಾರ್ಗ ಮಧ್ಯೆ ಬರುವ ಪ್ರವಾಸಿ ತಾಣಗಳ ಅನುಕೂಲತೆಯನ್ನು ಸಾರ್ವಜನಿಕ ಪ್ರಯಾಣಿಕರು ಅಥವಾ ಪ್ರವಾಸಿಗರು ಪಡೆದುಕೊಳ್ಳಬಹುದಾಗಿರುತ್ತದೆ.

talakaveri-temple

ಅಂತೆಯೇ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮವು ಮಡಿಕೇರಿಯಿಂದ ಚೇಲಾವರ, ಭಾಗಮಂಡಲ, ಕುಶಾಲನಗರ, ಹಾಗೂ ಮಾಂದಲಪಟ್ಟಿಗೆ ಮತ್ತು ವಿರಾಜಪೇಟೆಯಿಂದ ಭಾಗಮಂಡಲಕ್ಕೆ ಹಾಗೂ ಗೋಣಿಕೊಪ್ಪದಿಂದ ನಾಗರಹೊಳೆ ಮಾರ್ಗವಾಗಿ ಮೈಸೂರಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದ್ದು ಇವುಗಳ ಅನುಕೂಲತೆಯನ್ನು ಪಡೆದುಕೊಂಡು ಸಾರ್ವಜನಿಕ ಪ್ರಯಾಣಿಕರು ಮತ್ತು ಪ್ರವಾಸಿಗರು, ತಲಕಾವೇರಿ, ಅಭಿಫಾಲ್ಸ್, ಇರ್ಪುಫಾಲ್ಸ್, ದುಬಾರೆ, ಚೇಲಾವರ, ನಾಲ್ಕುನಾಡು ಅರಮನೆ ಮುಂತಾದ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ, ಪಸ್ತುತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮವು (kSTDC) ರಜಾ ದಿನಗಳಲ್ಲಿ ಮತ್ತು ವಾರಾಂತ್ಯ ತಲಕಾವೇರಿ, ಅಭಿಫಾಲ್ಸ್, ಇರ್ಪುಫಾಲ್ಸ್, ದುಬಾರೆ, ಚೇಲಾವರ, ನಾಲ್ಕುನಾಡು ಅರಮನೆ ಮುಂತಾದ ಸ್ಥಳಗಳಿಗೆ ಪ್ಯಾಕೇಜ್ ಪ್ರವಾಸ ವ್ಯವಸ್ಥೆಯನ್ನು ಮಾಡುತ್ತಿದ್ದು ಇವುಗಳ ಅನುಕೂಲತೆಯನ್ನು ಪ್ರವಾಸಿಗರು ಸಧ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಸಾರಿಗೆ ಸಚಿವರು ಉತ್ತರಿಸಿದರು.

Irupu_Falls

ಮಾಡಲಾಗಿದ್ದಲ್ಲಿ ಯಾವ ಯಾವ ನಿಗಧಿತ ಸಮಯಕ್ಕೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ? ಎಂಬ ಪ್ರಶ್ನೆಗೆ ಸಚಿವರು ಪ್ರಸ್ತುತ ನಿಗಮದ ವತಿಯಿಂದ ಭಾಗಮಂಡಲ, ಕುಶಾಲನಗರ, ಮಾಂದಲಪಟ್ಟಿ, ಚೇಲಾವರ ಹಾಗೂ ನಾಗರಹೊಳೆಗೆ ಕಲ್ಪಿಸಿರುವ ಸಾರಿಗೆಗಳ ವಿವರಗಳನ್ನು “ಅನುಬಂಧ-ಅ” ನಲ್ಲಿ ಒದಗಿಸಲಾಗಿದೆ ಎಂದು ತಿಳಿಸಿದರು.

dubare-elephant-bath-6-2

ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಕೆಲವು ಸ್ಥಳಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಸಾರಿಗೆ ವ್ಯವಸ್ಥೆ ಕಲ್ಲಿಸಲು ಸರ್ಕಾರದ ನಿಲುವೇನು? ಎಂಬ ಪ್ರಶ್ನೆಗೆ ಮೇಲಿನ ಕಂಡಿಕೆಗಳಲ್ಲಿ ವಿವರಿಸಿರುವಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ನಿಗಮದ ವತಿಯಿಂದ ಸಾರಿಗೆ ಸಂಪರ್ಕ ಒದಗಿಸಲಾಗಿದೆ ಎಂದು ಉತ್ತರಿಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *