ಬೆಳೆಗಾರನ ಮೇಲೆ ಒಂಟಿ ಸಲಗ ದಾಳಿ

Posted on: July 9, 2018

IMG20180709141326

ಸಿದ್ದಾಪುರ : ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರಿಗೆ ಗಾಯಗೊಂಡಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನೆಲ್ಯಹುದಿಕೇರಿ ಗ್ರಾಮದ ನಿವಾಸಿ ಮುಹಮ್ಮದ್ ಅಲಿ (62) ಎಂಬುವರೇ ಆನೆ ದಾಳಿಯಿಂದ ಗಾಯಗೊಂಡವರು.

ಭಾನುವಾರ ಸಂಜೆ ಬೆಟ್ಟದಕಾಡುವಿನ ತಮ್ಮ ತೋಟಕ್ಕೆ ತೆರಳಿದ ಸಂದರ್ಭ ಎದುರಿನಿಂದ ಬಂದ ಒಂಟಿ ಸಲಗ ಏಕಾ ಏಕಿ ದಾಳಿ ಮಾಡಿದ್ದು, ಗಾಬರಿಗೊಂಡು ಓಡಿದ ಸಂದರ್ಭ ಬಿದ್ದು ತಲೆ ಮತ್ತು ಕೈಗಳಿಗೆ ಗಾಯಗಳಾಗಿದೆ. ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ರಂಜನ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಬೆಟ್ಟದಕಾಡುವಿನಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅಲ್ಲಿಂದ ಬೇರೆಡಗೆ ಓಡಿಸಲಾಯಿತು.

ಗ್ರಾಮಸ್ಥರು ಆತಂಕ : ನೆಲ್ಯಹುದಿಕೇರಿ ಮತ್ತು ಬೆಟ್ಟದಕಾಡು ಜನ ನಿಬಿಡ ಪ್ರದೇಶವಾಗಿದ್ದು, ಇಲ್ಲಿ 15ಕ್ಕೂ ಅಧಿಕ ಆನೆಗಳು ಬೀಡು ಬಿಟ್ಟಿದೆ. ಇದರಿಂದ ಜನರು ಆತಂಕಗೊಂಡಿದ್ದು, ಆನೆಗಳನ್ನು ಶಾಸ್ವತವಾಗಿ ಅರಣ್ಯಕ್ಕೆ ಅಟ್ಟ ಬೇಕೆಂದು ಒತ್ತಾಯಿಸಿದ್ದಾರೆ.

IMG20180709141321

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *