ಬ್ರೇಕಿಂಗ್ ನ್ಯೂಸ್

ಶಿಕ್ಷಕಿ ಲಾಸ್ಯ ತೇಜಸ್ವಿ ಮರಣ ಪ್ರಕರಣ – ಸಂಘ ಸಂಸ್ಥೆಗಳಿಂದ ಪ್ರತಿಭಟನೆ

Posted on: July 11, 2018

laasya-02

ವಿರಾಜಪೇಟೆ : ಇತ್ತಿಚೆಗೆ ವಿರಾಜಪೇಟೆ ನಗರದ ನಿವಾಸಿ ಕೀರ್ತನ್ ಕಾರ್ಯಪ್ಪ ಅವರ ಪತ್ನಿ ಲಾಸ್ಯ ತೆಜಸ್ವಿ ಅವರ ಹೆರಿಗೆಯ ಸಂಧರ್ಭದಲ್ಲಿ ಹೆಚ್ಚಿನ ವೈಧ್ಯಕೀಯ ಸಲಕರಣೆಗಳು ಇಲ್ಲದೆ ಮತ್ತು ವೈಧ್ಯರ ನಿರ್ಲಕ್ಷೈದಿಂದ ಸಾವು ಸಂಭವಿಸಿದೆ ಎಂದು ಸಂಘ ಸಂಸ್ಥೆಗಳು ಮತ್ತು ಬಂದು ಮಿತ್ರರು ಇಂದು ಪ್ರತಿಭಟನೆ ನಡೆಸಿದರು.
ವಿರಾಜಪೇಟೆ ನಗರದ ಅಪ್ಪಯ್ಯ ಸ್ವಾಮಿ ರಸ್ತೆಗೆ ಹೊಂದಿಕೊಂಡಿರುವಂತೆ ಹೊಸ ಬಡವಾಣೆಯ ನಿವಾಸಿ ಕೀರ್ತನ್ ಕಾರ್ಯಪ್ಪ ಅವರ ಧರ್ಮಪತ್ನಿ ಶಿಕ್ಷಕಿಯಾದ ಲಾಸ್ಯ ತೇಜಸ್ವಿ 26. 01-07-2018 ರಂದು ವಿರಾಜಪೇಟೆ ಖಾಸಾಗಿ ಅಸ್ಪತ್ರೆಯಾದ ಅಂಬಿಕ ನರ್ಸಿಂಗ್ ಹೌಸ್ ನಲ್ಲಿ ಹೆರಿಗೆಗೆಂದು ದಾಖಾಲಾಗಿದ್ದಾರೆ ನಂತರ ದಿನಾಂಕ 02-07-2018 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಂತರದಲ್ಲಿ ಅಧಿಕ ರಕ್ತ ಶ್ರವವಾಗುತ್ತಿದೆ ಎಂದು ಮಡಿಕೇರಿ ಅಸ್ಪತ್ರಗೆ ರವಾನಿಸಲಾಗಿದ್ದು ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆಯು ಫಲಕಾರಿಯಾಗದೆ ಸಾವು ಸಂಭವಿಸಿತು.ಈ ಮರಣವನ್ನು ಗಂಭೀರವಾಗಿ ತೆಗೆದುಕೊಂಡ ಕುಟುಂಭಸ್ತರು ಬಂದು ಮಿತ್ರರರು ಮತ್ತು ಸಂಘ ಸಂಸ್ಥೆಗಳು ಇಂದು ನಗರದ ಗಡಿಯಾರ ಕಂಭದ ಬಳಿ ವೈಧ್ಯರ ಮತ್ತು ಖಾಸಾಗಿ ಅಸ್ಪತ್ರೆಯ ವಿರೂದ್ದ ಘೋಷಣೆಗಳನ್ನು ಕೂಗೂತ್ತಾ ಪ್ರತಿಭಟನೆ ಮಾಡಿದರು ಈ ಸಂಧರ್ಭದಲ್ಲಿ ಕರ್ತಂಡ ಶೈಲ ಕುಟ್ಟಪ್ಪ ಅವರು ಮಾತನಾಡಿ ಖಾಸಾಗಿ ಅಸ್ಪತ್ರೆಗಳಲ್ಲಿ ಹಲವು ಮಾದರಿಗಳ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಅಲ್ಲದೆ ಶಸ್ತ್ರ ಚಿಕೀತ್ಸೆಗೆ ಅಧುನಿಕ ಮಾದರಿ ಸಲಕರಣೆಗಳು ಇಲ್ಲದೆ ಕಾರ್ಯ ನಡೆಸುತ್ತಿದ್ದಾರೆ ಅಮೂಲ್ಯವಾದ ಜೀವಗಳ ಮೇಲೆ ಚೆಲ್ಲಾಟ ಮಾಡುವ ಇಂತಹ ಖಾಸಾಗಿ ಅಸ್ಪತ್ರೆಗಳ ಪರವಾನಿಗೆ ರದ್ದುಗೋಳಿಸಬೇಕು ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು .ಇಂತಹ ಘೊರವಾರ ಘಟನೆಗಳು ಮರಕಳಿಸದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

laasya-01

ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ತಾಲ್ಲೂಕು ದಂಢಾಧಿಕಾರಿಗಳ ಕಛೇರಿಗೆ ತೆರಳಿ ತಹಶಿಲ್ದಾರ್ ಅವರ ಅನೂಪಸ್ಥಿತಿಯಲ್ಲಿ ಶಿರಸ್ತೆದಾರ್ ಪಿ.ಸಿ ಪ್ರವೀಣ್ ಕುಮಾರ್ ಅವರೀಗೆ ಅಂಭಿಕ ನರ್ಸಿಂಗ್ ಹೊಂ ನ ವೈಧ್ಯರಾದ ಶಸಿಕಲಾ ಕೆ.ಎಸ್ ಅವರ ಪರವಾನಿಗೆ ರದ್ದುಗೊಳಿಸುವಂತೆ ಹಾಗು ಸಂಭಂದಿಸಿದ ಇಲಾಖೆಗಳು ನರ್ಸಿಂಗ್ ಹೊಂ ಮೇಲೆ ಕ್ರಮ ಜರುಗಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯ ವೇಳೆ ಲಾಸ್ಯ ತೆಜಸ್ವಿ ಅವರ ಪತಿ ಕೀರ್ತನ್ ಕಾರ್ಯಪ್ಪ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿಯ ಸದಸ್ಯರು ,ಮರಂದೊಡ ಸ್ಪೋಟ್ರ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ನ ಸದಸ್ಯರು, ಕೊಡವ ಸಂಘ ಸದಸ್ಯರು ಮರಂದೊಡ ಸ್ತ್ರಿ ಶಕ್ತಿ ಸಂಘ ಮತ್ತು ಸ್ವ ಸಹಾಯ ಸಂಘದ ಸದಸ್ಯರು ಮರೊದೊಡ, ಪ್ರವೀಣ್ ಜನಪ್ರತಿನಿದಿಗಳಾದ ಯೋಗೆಶ್ ನಾಯ್ದ ,ಪಿ.ಎ ಮಂಜುನಾಥ್ ಮತ್ತು ಸಾರ್ವಜನಿಕರು ಹಾಜರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *