‘ಕೊಡಗು ಎಂದರೆ ಮಳೆ, ಮಳೆ ಎಂದರೆ ಕೊಡಗು’

Posted on: August 14, 2018

DSC05988

ಕೊಡಗು ಎಂದರೆ ಮಳೆ, ಮಳೆ ಎಂದರೆ ಕೊಡಗು ಎಂಬಂತಾಗಿದೆ ಜಿಲ್ಲೆಯ ಪರಿಸ್ಥಿತಿ, ಬಿಡುವು ನೀಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಯಾವುದು ಗದ್ದೆ, ಯಾವುದು ಕೆರೆ ಎಂಬುದೇ ತಿಳಿಯದಂತಾಗಿದೆ. ಅಷ್ಟರ ಮಟ್ಟಿಗೆ ಗದ್ದೆಗಳು ಜಲಾವೃತವಾಗಿವೆ. ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಇಲ್ಲಿನ ಜನಜೀವನ ಪರಿಸ್ಥಿತಿ ಅಸ್ತವ್ಯಸ್ಥ ಉಂಟಾಗಿದೆ.

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಭಾಗಮಂಗಲ-ಅಯ್ಯಂಗೇರಿ ರಸ್ತೆ ಬಂದಾಗಿರುವುದು, ಲಕ್ಷ್ಮಣ ತೀರ್ಥ ನದಿಯಲ್ಲಿ ಪ್ರವಾಹ ಉಂಟಾಗಿ ಗದ್ದೆಗಳು ಕೆರೆಯಾಗಿರುವುದು, ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿರುವುದು, ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಸುರಿದ ವ್ಯಾಪಕ ಮಳೆಗೆ ಜಲಾಶಯಗಳು ಭರ್ತಿಯಾಗಿದ್ದವು. ಮುಂದುವರಿದು ಆಗಸ್ಟ್ ತಿಂಗಳಲ್ಲಿಯೂ ಬಿಡುವು ನೀಡದೆ ನಿರಂತರ ಮಳೆ ಸುರಿಯುತ್ತಿರುವುದರಿಂದ ಕೊಡಗು ಜಿಲ್ಲೆಯಲ್ಲಿ ಒಂದು ರೀತಿ ಸೂರ್ಯನ ಬೆಳಕು ಕಾಣದ ವಾತಾವರಣ ನಿರ್ಮಾಣವಾಗಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಭಾಗಮಂಡಲದಲ್ಲಿ 252, ಹುದಿಕೇರಿಯಲ್ಲಿ 216, ಶ್ರೀಮಂಗಲದಲ್ಲಿ 215, ಶಾಂತಳ್ಳಿಯಲ್ಲಿ 188, ಕೊಡ್ಲಿಪೇಟೆಯಲ್ಲಿ 170, ನಾಪೋಕ್ಲು 169, ಸೋಮವಾರಪೇಟೆಯಲ್ಲಿ 124, ಸಂಪಾಜೆ 103 ಮಿ.ಮೀ ದಾಖಲೆಯ ಮಳೆಯಾಗಿರುವುದು ಗೊತ್ತಾಗುತ್ತದೆ. ಸಾಕಪ್ಪ, ಸಾಕು ಮಳೆ ಎಂಬುವ ಮಾತು ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ. ಕೊಡಗಿನಲ್ಲಿ ಎಲ್ಲಿ ನೋಡಿದರೂ ಬರೆ ಕುಸಿತ, ಮರಗಳು ರಸ್ತೆಗೆ ಉರುಳಿರುವುದು ಹೀಗೆ ಬಿಡುವು ನೀಡದೆ ನಿರಂತರ ಮಳೆಯಿಂದಾಗಿ ನಾಗರಿಕರು ಹೊರಗೆ ಬರಲು ಹಿಂದೆ-ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. DSC05985

DSC05976

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *