ಕ್ರಿಕೆಟ್ ದಿಗ್ಗಜ ಅಜಿತ್ ವಾಡೇಕರ್ ಇನ್ನಿಲ್ಲ

Posted on: August 16, 2018

201808152327451075_Former-Indian-test-captain-Ajit-Wadekar-passes-away-at-77-in_SECVPF

ಮುಂಬೈ: ನಾಯಕ, ಮ್ಯಾನೇಜರ್ ಆಗಿ ಭಾರತ ತಂಡವನ್ನು ಗೆಲುವಿನ ಹಳಿಗೆ ತಂದು ನಿಲ್ಲಿಸಿದ ಮಾಜಿ ಕ್ರಿಕೆಟಿಗ ಅಜಿತ್ ವಾಡೇಕರ್ (77) ವಯೋಸಹಜ ಅಸ್ವಸ್ಥತೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

1966ರಲ್ಲಿ ವಿಂಡೀಸ್ ವಿರುದ್ಧ ಆಡುವ ಮೂಲಕವೇ ಟೆಸ್ಟ್ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ ಅಜಿತ್ ವಾಡೇಕರ್, 1971ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ತಂಡವನ್ನು ಮುನ್ನಡೆಸಿದರು. ವಿಶ್ವದ ಕ್ರಿಕೆಟ್​ ದೈತ್ಯರು ಎಂದೇ ಹೆಸರಾಗಿದ್ದ ವಿಂಡೀಸ್ ತಂಡವನ್ನು ಮೊದಲ ಬಾರಿ ಅದರದ್ದೇ ನೆಲದಲ್ಲಿ ಸೋಲಿಸಿದ ಕೀರ್ತಿ ವಾಡೇಕರ್ ಅವರಿಗೆ ಸಲ್ಲುತ್ತದೆ.

1990ರಲ್ಲಿ ಮೊಹಮದ್ ಅಜರುದ್ದೀನ್ ನಾಯಕತ್ವದ ಭಾರತ ತಂಡಕ್ಕೆ ಮ್ಯಾನೇಜರ್ ಆಗಿದ್ದ ವಾಡೇಕರ್ ಮೈದಾನದ ಹೊರಗೆ ನಿಂತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಇವರ ಕಾಲದಲ್ಲಿ ಭಾರತ ಹಲವು ಗೆಲುವಿನ ದಾಖಲೆಗಳನ್ನು ಬರೆಯಿತು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *