ಜಿಲ್ಲಾ ಕಾಂಗ್ರೆಸ್‍ನಿಂದ 76ನೇ ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವ

Posted on: August 10, 2018

Black-11
ಮಡಿಕೇರಿ  : ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಕ್ವಿಟ್ ಇಂಡಿಯಾ ಚಳವಳಿ ಮಹತ್ವದ ಪಾತ್ರ ವಹಿಸಿತ್ತು ಎಂದು ಕೆ.ಪಿ.ಸಿ.ಸಿ. ಹಿರಿಯ ಪದಾಧಿಕಾರಿ ಟಿ.ಪಿ.ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಛೇರಿಯಲ್ಲಿ ಜರುಗಿದ 76ನೇ ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಖಿಲ ಭಾರತ ಕಾಂಗ್ರೆಸ್ ಸಭೆಗಳಲ್ಲಿನ ನಿರ್ಣಯಗಳಿಗೆ ಬ್ರಿಟಿಷ್ ಸರಕಾರ ಯಾವುದೇ ಮಹತ್ವ ನೀಡದಿರುವುದನ್ನು ಮನಗಂಡ ಮಹಾತ್ಮ ಗಾಂಧೀಜಿಯವರು 1940 ರ ವಾದ್ರಾ ಅಧಿವೇಶನದಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಿ ಅಂದಿನ ಬ್ರಿಟಿಷ್ ಪ್ರಧಾನಿ ವಿನ್ಸ್‍ಟೆಂಟ್ ಚರ್ಚಿಲ್ ಅವರಿಗೆ ಸಲ್ಲಿಸಿದಾಗ ಅದನ್ನು ಅವರು ತಿರಸ್ಕರಿಸಿದರು.

1942ರ ಆ.8 ರಂದು ಮುಂಬಯಿಯ ವಾಲಿಯಾ ಮೈದಾನದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಯೂಸೂಫ್ ಆಲಿ ಅವರು ಸೂಚಿಸಿದ ಭಾರತ್ ಛೊಡೋ ಹೆಸರಿನಲ್ಲಿ ದೇಶ ವ್ಯಾಪಿ ಅಂದೋಲನಕ್ಕೆ ಮಹಾತ್ಮ ಗಾಂಧಿ ಅವರು ಕರೆ ನೀಡಿದರು.

ಆ.9 ರಂದು ಗಾಂಧೀಜಿ ಸೇರಿಂದತೆ ಕಾಂಗ್ರೆಸ್‍ನ ಎಲ್ಲಾ ನಾಯಕರ ಬಂಧನವಾಯಿತು. ಅಂದೋಲನ ಚುರುಕು ಪಡೆದುಕೊಂಡು 1947 ಆ.15 ರಂದು ಸ್ವಾತಂತ್ರ್ಯ ದೊರೆಯುವವರೆಗೂ ಚಳುವಳಿ ಯಶಸ್ವಿಯಾಯಿತು ಎಂದು ರಮೇಶ್ ವಿವರಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಡಿ.ಸಿ.ಸಿ ಉಪಾಧ್ಯಕ್ಷ ಹನೀಫ್, ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ವೃತ್ತಿಪರ ಘಟಕದ ಅಧ್ಯಕ್ಷ ಅಂಬೆಕಲ್ ನವೀನ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪಾರ್ವತಿ ಫ್ಯಾನ್ಸಿ, ಸಾಮಾಜಿಕ ಜಾಲತಾಣದ ನಗರಾಧ್ಯಕ್ಷ ಚಂದ್ರಶೇಖರ್, ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ, ತಜಸ್ಸುಂ, ಡಿ.ಸಿ.ಸಿ. ಸದಸ್ಯ ಪುಷ್ಪಪೂಣಚ್ಚ, ವಿ.ಆರ್.ರಾಣಿ, ಎಸ್.ವಿ.ಉಷಾ ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *