ಮಂಗಳೂರಿನಲ್ಲಿ ನಡೆದ ಕೊಡವ ಸ್ಟುಡೆಂಟ್ ಅಸೋಸಿಯೇಷನ್ ನ ಉದ್ಭಾಟನೆ ಸಮಾರಂಭ

Posted on: August 14, 2018

WhatsApp Image 2018-08-14 at 7.05.06 PM
ಮಡಿಕೇರಿ : ಕೊಡವ ಸ್ಟುಡೆಂಟ್ ಅಸೋಸಿಯೇಷನ್ ಉದ್ಘಾಟನಾಕಾರ್ಯಕ್ರಮಕೊಟ್ಟಂಗಡಯಕ್ಷಿತ್ ಬೊಪಣ್ಣನವರ ಅಧ್ಯಕ್ಷತೆಯಲ್ಲಿ ದಿ: 12-08-2018ರಂದು ಸೈಂಟ್ ಅಸೋಸಿಯೇಷನ್ ಪ್ರೈಮರಿ ಹಾಲ್‍ನಲ್ಲಿ ನಡೆಯಿತು. ಈ ಉದ್ಘಾಟನೆ ಸಮಾರಂಭ ಅಡೆಂಗಡ ಆದರ್ಶ ಅವರ ಹಾಡಿನ ಪ್ರಾರ್ಥನೆ ಗೀತೆಯ ಮೂಲಕ ಆರಂಭಗೊಂಡಿತು.

ಈ  ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪೋಲೀಸ್‍ ಇನ್ಸ್‍ಪೆಕ್ಟರ್ (ಸ್ಟೇಟ್‍ಇಂಟೆಲಿಜಂಟ್) ಪೆಮ್ಮಚಂಡ ಅನುಪ್ ಮಾಧಪ್ಪನವರಾಗಿದ್ದರು. ನಮ್ಮ ಮುಖ್ಯ ಅತಿಥಿಯಾದಂತ ಅನುಪ್‍ರವರು ಮಕ್ಕಳಿಗೆ ವೃತ್ತಿ ಮಾರ್ಗದರ್ಶನ ಹಾಗೂ ಹಲವಾರು ಸಲಹೆಗಳನ್ನು ನೀಡಿದರು. ಹಾಗೆಯೆ ಮಕ್ಕಳಿಗೆ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕೆಂದು ಮಕ್ಕಳನ್ನು ಪ್ರೋತ್ಸಾಹಿಸಿ ಒಂದೆರಡು ಸಹಿ ಮಾತನ್ನು ನುಡಿದರು.

ಹಾಗೆ ಕೆ.ಎಸ್.ಎ ಎಡ್ವೈಸಸ್‍ ಆಗಿರುವಂತ ಸೋಮಯಂಡಚಂಗಪ್ಪ ಹಾಗೂ ಬಟ್ಟೀರ, ಅಜಿತ್ ಬೊಪ್ಪಯ್ಯನವರು ಮಕ್ಕಳನ್ನು ಪ್ರೋತ್ಸಾಹಿಸಿ ಒಂದೆರಡು ಮಾತನಾಡಿದರು. 2017-18ನೇ ಸಾಲಿನ ಕೆ.ಎಸ್.ಎಯ ಮ್ಯಾಗ್ಸಿನ್‍ನನ್ನು ಮಾಜಿ ಅಧ್ಯಕ್ಷ ಒಡಿಯಂಡ ಪುಣಚ್ಚ ಮತ್ತು ಮಾಜಿ ಖಜಾಂಚಿ ಚಿಮನಮಡ ಸುಬ್ರಹಣಿಯವರ ಮೂಲಕ ಬಿಡುಗಡೆಮಾಡಲಾಯಿತು. ನಂತರತಾರವರಿ ಸಾಂಸ್ಕತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಯಿತು.  ಸಮಾರಂಭಕ್ಕೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬೇರೆ ಬೇರೆಕಾಲೇಜಿನ 180 ಕೊಡವ ಮಕ್ಕಳು ಪಾಲ್ಗೊಂಡಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *