ರಾಜ್ಯ ಮಟ್ಟದ ಟೆಕ್ವಾಂಡೊ ಸ್ಪರ್ಧೆ ಕೊಡಗಿನ ವಿದ್ಯಾರ್ಥಿಗಳಿಗೆ ಪದಕ

Posted on: August 9, 2018

Z TWEKNDO
ಮಡಿಕೇರಿ  : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ತರಬೇತುದಾರ ಬಿ.ಜಿ. ಲೋಕೇಶ್ ರೈ ತಿಳಿಸಿದ್ದಾರೆ.

ಕರ್ನಾಟಕದ ಟೆಕ್ವಾಂಡೊ ಸಂಸ್ಥೆಯ ಆಶ್ರಯದಲ್ಲಿ ನಡೆದ ಹನ್ನೆರಡು ವರ್ಷದ ಒಳಗಿನವರ ರಾಜ್ಯ ಮಟ್ಟದ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ್ದ ಎನ್.ಪ್ರೀತಮ್ ಹರೀಶ್ ಒಂದು ಚಿನ್ನ, ಬಿ.ಎಲ್. ಭಾವನಾ ರೈ (ಐಶು) ಒಂದು ಬೆಳ್ಳಿ ಹಾಗೂ ತೆನ್ನೀರ ಶಾನ್ ಪೊನ್ನಪ್ಪ ಒಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರೊಂದಿಗೆ ಎಮ್. ರಾಹುಲ್, ಚಂದ್ರಶೇಖರ್, ಪ್ರಜ್ಞಾ ಮೇಲಾಯುಧನ್ ಹಾಗೂ ಸುಹಾಸ್ ವಿ.ಶಿವಣ್ಣ ಸ್ಪರ್ಧಿಸಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *