ಎಸ್.ಡಿ.ಪಿ.ಐ ಹಾಗೂ ಐಕೇರ್ ಫೌಂಡೇಶನ್ ವತಿಯಿಂದ ನೆರೆಸಂತ್ರಸ್ತರಿಗೆ ಇಟ್ಟಿಗೆ ವಿತರಣೆ

Posted on: September 18, 2018
IMG-20180917-WA0035
ಕುಶಾಲನಗರ : ಎಸ್.ಡಿ‌.ಪಿ.ಐ ಹಾಗೂ ಬೆಂಗಳೂರಿನ ಐ ಕೇರ್ ಫೌಂಡೇಶನ್ ವತಿಯಿಂದ ಕೊಡಗಿನಲ್ಲಿ ನೆರೆಪ್ರವಾಹದಿಂದ ಮನೆಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಲು ಸೋಮವಾರ ಇಟ್ಟಿಗೆ ವಿತರಿಸಲಾಯಿತು.
ನೆರೆಪ್ರವಾಹದಿಂದ ತಮ್ಮ ಮನೆಯ ಗೋಡೆ ಬಿದ್ದು ಸಂಸ್ರಸ್ತರಾಗಿದ್ದ ಕುಶಾಲನಗರದ ಪತ್ರಕರ್ತ ಕೆ.ಟಿ.ಶ್ರೀನಿವಾಸ್ರವರಿಗೆ ಮನೆ ನಿರ್ಮಾಣಕ್ಕಾಗಿ ಇಟ್ಟಿಗೆ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಐ ಕೇರ್ ಫೌಂಡೇಶನ್ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕರಾದ ಮುಹಸಿನ್ ಹಾಗೂ ನಗರ ಎಸ್.ಡಿ‌.ಪಿ.ಐ ಅಧ್ಯಕ್ಷ ಆಬಿದ್ ಮಾತನಾಡಿ, ಇಂದು ಎಸ್.ಡಿ.ಪಿ.ಐ ಹಾಗೂ ಐ ಕೇರ್ ಫೌಂಡೇಶನ್ ಟ್ರಸ್ಟ್ ವತಿಯಿಂದ ನೆರೆಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಇಟ್ಟಿಗೆ ವಿತರಿಸಿದ್ದೇವೆ. ಇದೇ ರೀತಿ ತಮ್ಮ ಕೈಯಿಂದಾದ ಸೇವೆಯನ್ನು ನೆರೆಸಂತ್ರರಿಗೆ ಮಾಡಲಿದ್ದು, ಸರ್ಕಾರ ಕೂಡಾ ಈ ಬಗ್ಗೆ ಗಮನಹರಿಸಬೇಕಾಗಿದೆ ಎಂದರು.
ಈ ಸಂದರ್ಭ ಐ ಕೇರ್ ಫೌಂಡೇಶನ್ ಟ್ರಸ್ಟಿನ ಯೂನುಸ್, ಎಸ್.ಡಿ.ಪಿ.ಐ ನಗರ ಉಪಾಧ್ಯಕ್ಷ
ಹನೀಫ್ ಹಾಗೂ ಪದಾಧಿಕಾರಿಗಳಾದ ಅಝೀಝ್,
 ಇಲ್ಯಾಸ್, ಶರೀಫ್, ಮುಜೀಬ್, ಸಲಾಂ, ಅಝೀಝ್, ಜಕ್ರಿಯ, ಕಲೀಲ್, ಘನಿ, ಇನ್ನಿತರರು ಇದ್ದರು‌

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *