ವಿಷ ಸೇವಿಸಿ ಪೌರ ಕಾರ್ಮಿಕರಿಬ್ಬರು ಆತ್ಮಹತ್ಯೆ

Posted on: September 5, 2018

22-5

ಮಡಿಕೇರಿ : ನಗರದ ಗಾಂಧಿ ಮೈದಾನದಲ್ಲಿರುವ ರಂಗಮಂಟಪದ ಹಿಂಬದಿಯಲ್ಲಿ ವಾಸವಾಗಿದ್ದ ಪೌರ ಕಾರ್ಮಿಕರಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಡಿಕೇರಿ ನಗರ ಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ (38) ಮತ್ತು ಉಷಾ (29) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು .

ಮೂಲತಃ ಮೈಸೂರಿನ ಅಶೋಕಪುರ ಸಮೀಪದ ಅಂಬೇಡ್ಕರ್ ಕಾಲೋನಿ ನಿವಾಸಿ ಸತೀಶ್ ಮತ್ತು ಹೆಚ್ ಡಿ ಕೋಟೆ ರಸ್ತೆಯ ಸಿಲ್ಕ್ ಫ್ಯಾಕ್ಟರಿ ನಿವಾಸಿ ಉಷಾ ಕಳೆದ 8 ವರ್ಷಗಳಿಂದ ಮಡಿಕೇರಿ ನಗರ ಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ನಗರದ ರಂಗಮಂಟಪದ ಹಿಂಬದಿಯ ವಸತಿಯೊಂದರಲ್ಲಿ ಜೊತೆಯಲ್ಲೇ ವಾಸಿಸುತ್ತಿದ್ದ ಈ ಇಬ್ಬರು ಈ ಇಬ್ಬರು ಪೌರ ಕಾರ್ಮಿಕರು ಕೂಡ ವಿವಾಹಿತರಾಗಿದ್ದು ಪರಸ್ಪರ ಪತಿ,ಪತ್ನಿಯನ್ನು ತೊರೆದು ಪ್ರತ್ಯೇಕವಾಗಿ ಬದುಕು ಸಾಗಿಸುತ್ತಿದ್ದರು ಎನ್ನಲಾಗಿದೆ.

ಕಳೆದ ಎರಡು ದಿನಗಳಿಂದ ಕೆಲಸಕ್ಕೂ ಬಾರದೆ , ಮನೆಯ ಬಾಗಿಲನ್ನು ತೆರೆಯದೇ ಇದ್ದ ಹಿನ್ನೆಲೆಯಲ್ಲಿ ಪಕ್ಕದ ಮನೆಯ ನಿವಾಸಿ ಮೀನಾಕ್ಷಿ ಎಂಬಾಕೆ  ಸೆ.5 ರಂದು ಸಂಜೆ ಕಿಟಕಿಯಿಂದ ಗಮನಿಸಿದಾಗ ಇಬ್ಬರ ದೇಹ ನಿಶ್ಚಲವಾಗಿದ್ದ ಸ್ಥಿತಿಯಲ್ಲಿದ್ದವು. ನಗರ ಸಭೆಯ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ಇಬ್ಬರು ಮೃತಪಟ್ಟಿರುವುದು ಕಂಡು ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಡಿಕೇರಿ ನಗರ ಪೊಲೀಸರು ಮೃತ ದೇಹಗಳ ಪರಿಶೀಲನೆ ನಡೆಸಿದ್ದು, ಎರಡು ದಿನಗಳ ಹಿಂದೆಯೇ ಈ ಇಬ್ಬರು ಜೊತೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು, ಮೃತಪ್ರಾ ಕುಟುಂಬ ವರ್ಗಕ್ಕೆ ಮಾಹಿತಿ ನೀಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ ಹೆಚ್ಚಿನ ತನಿಖೆಯಿಂದಷ್ಟೇ ಈ ಇಬ್ಬರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬರಲಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *