ಸಂತ್ರಸ್ತರೀಗೆ ನೀಡಲಾಗುವ ಸರ್ಕಾರದ ಅಹಾರದ ಕೀಟ್ ಅನ್ಯರ ಪಾಲಾಗುತ್ತಿದೆ ವಿ.ಅರ್ ರಜನಿಕಾಂತ್ ಅರೋಪ

Posted on: September 11, 2018

IMG-20180908-WA0045
ವಿರಾಜಪೇಟೆ : ಕೊಡಗಿನಲ್ಲಿ ಸಂಭವಿಸಿದ ಭೀಕರತೆಗೆ ತುತ್ತಾದ ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಕಿಟ್ ಗಳು ಅನ್ಯರ ಪಾಲಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ವಿ.ರಜನಿಕಂತ್ ಅವರು ಪತ್ರಿಕಾಗೊಷ್ಟಿಯಲ್ಲಿ ಅರೋಪಿಸಿದರು.

ವಿರಾಜಪೇಟೆ ನಗರದ ಸುಣ್ಣಕೇರಿಯಲ್ಲಿರುವ ಸಮೂದಾಯ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ವಿ. ಅರ್. ರಜನಿಕಾಂತ್ ಅವರು ಜಿಲ್ಲೆಯಲ್ಲಿ ಘಟಿಸಿಹೊದ ಭೀಕರ ವಿಪತ್ತಿಗೆ ಸಾರ್ವಜನಿಕರು ಸೇರಿದಂತೆ ಸಂಘ ಸಂಸ್ಥೆಗಳು ಮತ್ತು ರಾಜ್ಯ ದೇಶ ವಿದೇಶಗಳಿಂದ ಪರಿಹಾರರ್ಥ ಸಮಾಗ್ರಿಗಳು ಮತ್ತು ಧನ ಸಹಾಯಗಳು ಒದಗಿ ಬಂದಿದೆ .

IMG-20180908-WA0037

ದಿನಾಂಕ 07-09-2018 ಪಟ್ಟಣ ಪಂಚಾಯಿತಿಯ ಅವರಣದಲ್ಲಿ ಅಹಾರ ಇಲಾಖೆಯ ಕಿಟ್ ವಿರಣೆಯಲ್ಲಿ ಸಂತ್ರಸ್ಥಲ್ಲದವರು ಕಿಟ್ ಪಡೆದುಕೊಂಡು ಹೊಗುತ್ತಿರುವುದನ್ನು ಗಮನಿಸಿದ್ದು ಘನವೆತ್ತ ರಾಜ್ಯ ಸರ್ಕಾರವು ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿವಿಕೋಪಕ್ಕೆ ಸಂಭಂದಿಸಿದಂತೆ ಇತ್ತಿಚೆಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಲಾಯದಿಂದ ಕೊಡಗಿನ ಸಂತ್ರಸ್ತ ಕುಟುಂಭಕ್ಕೆ ತಲ( 10ಕೆ.ಜಿ ಅಕ್ಕಿ, ಒಂದು ಕೇ.ಜಿ ಸಕ್ಕರೆ,ಒಂದು ಕೇ.ಜಿ ಉಪ್ಪು,ಒಂದು ಕೇ.ಜಿ ತೊಗರಿ ಬೆಳೆ ,ಒಂದು ಲೀ ತಾಳೆ ಎಣ್ಣೆ ಮತ್ತು 5 ಲೀ ಸಿಮೇಎಣ್ಣೆ ) ಕಿಟ್ ನೀಡಿತು ಪ್ರಕೃತಿ ವಿಕೋಪದ ತುರ್ತು ಸಂಧರ್ಭದಲ್ಲಿ ಅಹಾರ ಇಲಾಖೆ ಕೆಲವು ಮೇಲ್ ಅಧಿಕಾರಿಗಳು ಅವೈಜ್ಞಾನಿಕ ರೀತಿಯಲ್ಲಿ ವರಿದಿ ಸಿಧ್ದ ಪಡಿಸಿ ಕೊಡಗಿನ ಎಲ್ಲಾ ಪರಿಹಾರ ಕೇಂದ್ರದಲ್ಲಿ ಅಶ್ರಯಪಡೆದ ಸಂತ್ರಸ್ಥ ಕುಟುಂಭಗಳಿಗೆ ಕಿಟ್ ನೀಡುವಂತೆ ತಿಳಿಸಿತು ಪರಿಹಾರ ಕಿಟ್ ವಿತರಣೆಯಲ್ಲಿ ಸಂತ್ರಸ್ತರ ಹೆಸರಿನಲ್ಲಿ ಕೆಲವರು ಮಾಹಾಮಳೆಗೆ ಯಾವುದೇ ರೀತಿಯಲ್ಲಿ ಮನೆ ಮತ್ತು ಇತರ ವಸ್ತುಗಳಿಗೆ ಹಾನಿಯಾಗದ ಕುಟುಂಭಗಳು ಆಹಾರ ಕಿಟ್ ಗಳು ಎತ್ತುವಳಿ ಮಾಡಿಕೊಂಡು ಹೊಗುತಿರುವುದು ವಿಪರ್ಯಾಸ ವಾಗಿದೆ.

ಸರ್ಕಾರದ ಪರಿಹಾರ ಸಮಾಗ್ರಿಗಳು ಅನ್ಯರ ಪಾಲಾಗುತ್ತಿದೆ ವಿಪತ್ತುನಿಂದ ಹಾನಿಗೆಗೋಳಗಾದ ಕುಟುಂಭದವರನ್ನು ಅಧಿಕಾರಿ ವರ್ಗಗಳು ಗುರುತು ಮಾಡವಲ್ಲಿ ವಿಫಲರಾಗಿದ್ದಾರೆ .ಹೀಗೆ ಸರ್ಕಾರದ ಹಲವು ಕಾರ್ಯಕ್ರಮಗಳು ದುರುಪಯೋಗವಾಗುತ್ತಿದೆ. ಇನ್ನಾದರು ಅಧಿಕಾರಿಗಳು ನೈಜ ಸಂತ್ರಸ್ತರನ್ನು ಗುರುತಿಸಿ ಪರಿಹಾರ ಸಮಾಗ್ರಿಗಳನ್ನು ವಿತರಣೆ ಮಾಡಬೇಕು ಇದರಿಂದ ಸರ್ಕಾರದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ.IMG-20180908-WA0046

ಅಲ್ಲದೆ ಕಳೆದ ಎರಡು ತಿಂಗಳಿಂದ ಎದಬಿಡದೆ ಸುರಿಯುತಿರುವ ಮಾಹಾಮಳೆಗೆ ಕೊಡಗಿನಲ್ಲಿ ಸಾವಿರಾರು ಎಕ್ರೆ ಕ್ರೀಷಿ ಪ್ರದೇಶಗಳು ನೆಲಸಮವಾಗಿದೆ ಕ್ರೀಷಿ ವಲಯ, ವಾಣಿಜ್ಯ ವಲಯ ಮತ್ತು ಇನ್ನಿತರ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಕೂಲಿ ಅವಲಂಭಿಸಿಕೊಂಡು ಜೀವನ ಸಾಗಿಸುತ್ತಿದ್ದ ಕಾರ್ಮಿಕರು ದುರ್ಭಲ ಜೀವನ ಸಾಗಿಸುವತ್ತಾ ಮುಂದಾಗಿದ್ದಾರೆ ಕೂಲಿ ಇಲ್ಲದೆ ಪರಿತಪಿಸುವ ವಾತವರಣ ನಿರ್ಮಾಣವಾಗಿದೆ ಹೀಗಿರುವಾಗ ರಾಜ್ಯ ಸಕಾರವು ಕೂಲಿ ಅವಲಂಭಿತ ಕಾರ್ಮಿಕರೀಗೂ ಅಹಾರ ಕಿಟ್ ನೀಡುವಂತಾಗಬೇಕು ಕೂಲಿ ಕಾರ್ಮಿಕರ ಜೀವನ ಹಸನು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇನೆ ಎಂದು ಹೇಳಿದರು.

ಪತ್ರಿಕಾಗೊಷ್ಟಿಯಲ್ಲಿ ಸಂಘಟನೆಯ ಸದಸ್ಯರಾದ ವಿ.ಅರ್. ಆನಂಧ್ ಅರ್ಜುನ್, ಲೋಕೆಶ್, ಮತ್ತು ರಮೇಶ್ ಉಪಸ್ಥಿತರಿದ್ದರು.

IMG-20180908-WA0047

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *