ಸಂಯುಕ್ತ ಸಂವಿಧಾನ ದಿವಸ್ ಅಂಗವಾಗಿ FMC ಕಾಲೇಜಿನಲ್ಲಿ ನಡೆದ ಭಾಷಣ ಸ್ಪರ್ಧೆ

Posted on: September 14, 2018

IMG20180914124936
ಮಡಿಕೇರಿ : ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನೆಹರು ಯುವ ಕೇಂದ್ರ, ತಾಲೂಕು ಯುವ ಕೇಂದ್ರ ವತಿಯಿಂದ ಸಂಯುಕ್ತ ಸಂವಿಧಾನ ದಿವಸದ ಅಂಗವಾಗಿ, ದೇಶಭಕ್ತಿ ಮತ್ತು ರಾಷ್ಟ್ರೀಯ ನಿರ್ಮಾಣದಲ್ಲಿ ಯುವ ಜನರು ಇದರ ಬಗ್ಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾಲೂಕು ಮಟ್ಟದ ಸ್ಪರ್ಧೆಗೆ ಕಾಲೇಜಿನ ನೌಶಧ, ಪ್ರಥಮ ಬಿಕಾಂ, ಅಮರ್ಜಿತ್, ದ್ವಿತೀಯ ಬಿಎಸ್ಸಿ, ಸಭಾ ಸಮೀರಾ ಅವರು ಆಯ್ಕೆಯಾದರು.

ಪುಣ್ಯ ತಂಡದಿಂದ ಪ್ರಾರ್ಥನೆ, ಹೇಮಂತ್ ಸ್ವಾಗತ ಕೋರಿದರು. ಅಥಿತಿಯಾಗಿ ಅವಿನಾಶ್ ಜಿ.ಗೋಖಲೆ, ಶ್ರೀಮತಿ ಹಿತಾ ಶ್ರೀಧರ್, ಎನ್ ಎಸ್ ಎಸ್ ಅಧಿಕಾರಿ ಸಚಿನ್ ಮುಂತಾದವರು ಭಾಗವಹಿಸಿದ್ದರು. ನೆಹರು ಯುವ ಕೇಂದ್ರದ ಅಧಿಕಾರಿಗಳು ಆಗಮಿಸಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *