ಸಾಲಕ್ಕೆ ಅಂಜಿ ಗೃಹಿಣಿ ಆತ್ಮಹತ್ಯೆ

Posted on: September 19, 2018

c5ae160f-3cb7-4924-9579-dea8e6fbf9eb
ಕುಶಾಲನಗರ : ಮೈಕ್ರೋ ಫೈನಾನ್ಸ್ ಸಂಘವೊಂದರ ಸಾಲದ ಭಾದೆಯಾ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆಯು ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ಜರುಗಿದೆ. ಮುಳ್ಳುಸೋಗೆ ಗ್ರಾಮದ ನಿವಾಸಿ ಸಂತೋಷ್(25) ಎಂಬುವವರ ಪತ್ನಿಯಾದ ಮಂಜುಳಾ(22) ಎಂಬಾಕೆಯೇ ಸಂಘದ ಸಾಲದ ವಸೂಲಾತಿಯ ಕಿರುಕುಳಕ್ಕೆ ಹೆದರಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದು.

ಕುಶಾಲನಗರದ ಮೈಕ್ರೋಫೈನಾನ್ಸ್ ಒಂದರಿಂದ ಸುಮಾರು 25 ಸಾವಿರ ರೂಗಳ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದು ಅದನ್ನು ಆರು ಕಂತುಗಳಲ್ಲಿ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಕೊಡಗು ಜಿಲ್ಲೆಯು ವಿಪರೀತ ನೆರೆಹಾವಳಿಯಿಂದ ತತ್ತರಿಸಿದ್ದು ಇಲ್ಲಿನ ಜನರು ಆಸ್ತಿ-ಪಾಸ್ತಿ ಮನೆ ಮಠ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿ ಇರುವುದನ್ನು ಮನಗಂಡ ಕೊಡಗು ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಸಾಲಗಾರರಾದ ಸಂತ್ರಸ್ತರ ಬಳಿ ಯಾವುದೇ ರೀತಿಯಲ್ಲಿ ಬಲವಂತದ ವಸೂಲಾತಿಯನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಾಗಲೀ ಸಹಕಾರ ಸಂಘದ ಬ್ಯಾಂಕ ಗಳಾಗಲಿ ಫೈನಾನ್ಸ್ ಕಂಪನಿಗಳಾಗಲಿ ಬಲವಂತದ ವಸೂಲಾತಿಯನ್ನು ಮಾಡಬಾರದು ಎಂಬ ಆದೇಶವನ್ನು ನೀಡಿದ್ದಾರೆ.

ಆದರೆ ಈ ಆದೇಶವನ್ನೇಲ್ಲಾ ಗಾಳಿಗೆ ತೂರಿರುವ ಇಲ್ಲಿನ ಮೈಕ್ರೋಫೈನಾನ್ಸ್ ಒಂದರ ಸಂಘದ ಕೆಲ ಏಜೆಂಟರು ನೆನ್ನೆ ಸಂಜೆ ನಾಲ್ಕು ಗಂಟೆಯ ವೇಳೆ ಮಂಜುಳಾರವರ ಮನೆಗೆ ಬಂದು ಸಾಲದ ಮರುಪಾವತಿಗೆ ಒತ್ತಾಯಿಸಿದ್ದು ಅಲ್ಲದೆ ಬಾಯಿಗೆ ಬಂದಂತೆ ಬೈದು ನಿಂದಿಸಿದ್ದು ಇದರಿಂದ ಮನನೊಂದ ತನ್ನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಂಜುಳಾ ಪತಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  

 

absolute-black

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *