ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಅ.16 ರಂದು ಅನುದಾನ ರಹಿತ ದಸರಾ ಕವಿಗೋಷ್ಠಿ “ಸಂತ್ರಸ್ತರಿಗೆ ಸಾಂತ್ವಾನ-ಬಂದವರಿಗೆ ತಣ್ಣೀರು”

Posted on: October 12, 2018

mohan.oct11-2

ಮಡಿಕೇರಿ : ಸರಕಾರ ಅನುದಾನ ಬಿಡುಗಡೆ ಮಾಡಿದ್ದರೂ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ರದ್ದುಪಡಿಸಿರುವುದನ್ನು ಆಕ್ಷೇಪಿಸಿ ಅಕ್ಟೋಬರ್ 16 ರಂದು “ಸಂತ್ರಸ್ತರಿಗೆ ಸಾಂತ್ವಾನ-ಬಂದವರಿಗೆ ತಣ್ಣೀರು” ಎಂಬ ಘೋಷವಾಕ್ಯದೊಂದಿಗೆ ಪರ್ಯಾಯ ಗೋಷ್ಠಿ ನಡೆಸಲು ನಿರ್ಧರಿಸಲಾಗಿದೆ ಎಂದು ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪತಿಳಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರದ ಅನುದಾನದ ನಡುವೆಯೂ ಪ್ರಧಾನ ಸಮಿತಿ ಕವಿಗೋಷ್ಠಿಯನ್ನು ರದ್ದು ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಇದು ಸಾಹಿತ್ಯ ಕ್ಷೇತ್ರಕ್ಕೆ ಮಾಡುವ ಅವಮಾನ ಎಂದು ಖಂಡಿಸಿದರು.

ಪ್ರತಿ ವರ್ಷ ವಿಶೇಷವಾಗಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ನಡೆಯುತ್ತಿದೆ. ಕಳೆದ ವರ್ಷ ದಸರಾ ಪ್ರಧಾನ ಸಮಿತಿಯಿಂದ 60 ಸಾವಿರ ರೂ.ಗಳನ್ನು ನೀಡಲಾಗಿತ್ತು. ಈ ಬಾರಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ದಸರಾ ಕಾರ್ಯಕ್ರಮಗಳೆಲ್ಲವೂ ರದ್ದಾಗಬಹುದು ಎಂದು ಹೇಳಲಾಗಿತ್ತು. ಅನುದಾನ ಬಿಡುಗಡೆಯಾದಿದ್ದರೆ ಈ ನಿರ್ಧಾರಕ್ಕೆ ಕವಿಗೋಷ್ಠಿ ಸಮಿತಿ ಕೂಡ ಬದ್ಧವಾಗಿತ್ತು. ಆದರೆ, ಇತ್ತೀಚೆಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ದಸರಾಕ್ಕೆ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಅದ್ಧೂರಿ ಇಲ್ಲದೆ ಸಾಂಪ್ರದಾಯಿಕ ದಸರಾ ಆಚರಣೆ ಮಾಡಿ ಎಂದು ಹೇಳಿದ್ದರು. ಸರಕಾರ 50 ಲಕ್ಷ ರೂ ಮಡಿಕೇರಿಗೆ ಹಾಗೂ 25 ಲಕ್ಷ ರೂ. ಗೋಣಿಕೊಪ್ಪಲುವಿಗೆ ಬಿಡುಗಡೆ ಮಾಡಿರುವುದನ್ನು ಕವಿಗೋಷ್ಠಿ ಸಮಿತಿ ಸ್ವಾಗತಿಸುತ್ತದೆ ಎಂದು ಹೇಳಿದರು.

ಆದರೆ, ಪ್ರಧಾನ ಸಮಿತಿ ಕವಿಗೋಷ್ಠಿ ನಡೆಸಿದರೆ ಕಪ್ಪುಚುಕ್ಕಿಯಾಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ರದ್ದು ಪಡಿಸಿರುವುದನ್ನು ಕವಿಗೋಷ್ಠಿ ಸಮಿತಿ ಖಂಡಿಸುತ್ತದೆ. ಕವಿಗೋಷ್ಠಿಯ ಮೂಲಕ ಸಂತ್ರಸ್ತರಿಗೆ ಧೈರ್ಯ ತುಂಬುವ ಕಾರ್ಯ ಆಗಬೇಕಿತ್ತು. ಏಕಾಏಕಿಯಾಗಿ ರದ್ದುಪಡಿಸಿರುವುದು ಸರಿಯಲ್ಲ. ದಶಮಂಟಪಗಳಿಗೆ ತಲಾ 2 ಲಕ್ಷ ರೂ. ಹಾಗೂ ಕರಗಗಳಿಗೆ ತಲಾ 1.5 ಲಕ್ಷ ರೂ. ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಉಳಿದ ಹಣದಲ್ಲಿ ಕವಿಗೋಷ್ಠಿಗೆ ಪುಟ್ಟ ಅನುದಾನ ನೀಡಬಹುದಿತ್ತು ಎಂದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಮೂಲಕ ದಸರಾಕ್ಕೆ ಹಣ ಬಿಡುಗಡೆಯಾಗುತ್ತಿದೆ. ಅದರ ಉದ್ದೇಶ ಕೂಡ ಕಲೆ, ಸಾಹಿತ್ಯ, ಸಂಸ್ಕತಿಯನ್ನು ಉಳಿಸುವಂತಹದ್ದು. ಆದರೆ ಕವಿಗೋಷ್ಠಿಯನ್ನು ಇದರಿಂದ ಯಾವ ಕಾರಣಕ್ಕೆ ಹೊರಗಿಟ್ಟಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಕವಿಗೋಷ್ಠಿಯಿಂದಾಗಿ ಸಾಕಷ್ಟು ಯುವ ಕವಿಗಳಿಗೆ ಪ್ರೋತ್ಸಾಹ  ಲಭ್ಯವಾಗಿದೆ. ಇದರ ಮಹತ್ವ ಕೆಲವರಿಗೆ ತಿಳಿದಿಲ್ಲ

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 16 ರಂದು ಬೆಳಗ್ಗೆ 10.30ಕ್ಕೆ ಬಾಲಭವನದಲ್ಲಿ ಪರ್ಯಾಯ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದ್ದು, “ದಸರಾ ಸಮಿತಿ ಅನುದಾನ ರಹಿತ” ಎಂಬ ಟ್ಯಾಗ್‍ಲೈನ್‍ನೊಂದಿಗೆ ಸಂತ್ರಸ್ತರಿಗೆ ಸಾಂತ್ವಾನ ಎಂಬ ವಿಷಯವನ್ನು ಇಡಲಾಗಿದೆ. ಸುಮಾರು 25 ಕವಿಗಳು ಕವನ ವಾಚಿಸಲಿದ್ದಾರೆ. ಸಾಹಿತಿ ಹಾಗೂ ಸಂತ್ರಸ್ತರಾಗಿರುವ ನಾಗೇಶ್ ಕಾಲೂರು ಅಧ್ಯಕ್ಷತೆ ವಹಿಸಲಿದ್ದು, ಕವಿ ಹಾಗೂ ಸಂತ್ರಸ್ತ ಕುಡೆಕಲ್ ಸಂತೋಷ್ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಜಿಲ್ಲಾಧಿಕಾರಿಗಳು ಆಗಮಿಸಲಿದ್ದಾರೆ.

ಕವಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ, ಸ್ಮರಣಿಕೆ, ಗೌರವಧನ, ಕಾಫಿ ಟೀ ಹಾಗೂ ಮಧ್ಯಾಹ್ನದ ಊಟ ಇರುವುದಿಲ್ಲ. ಯಾರಿಂದಲೂ ಹಣ ಸಂಗ್ರಹ ಮಾಡುವುದಿಲ್ಲ. ಅನುದಾನ ನೀಡದ ಕಾರಣಕ್ಕಾಗಿ ಬಂದವರಿಗೆ ಪ್ರತಿಭಟನೆಯ ಸಂಕೇತವಾಗಿ “ತಣ್ಣೀರು” ವಿತರಿಸಲು ಸಮಿತಿಯ ತುರ್ತು ಸಭೆಯಲ್ಲಿ ನಿರ್ಧರಿಸಲಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ನಿಕಟ ಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಕವಿಗೋಷ್ಠಿಯನ್ನು ರದ್ದು ಪಡಿಸಿರುವುದು ಆಕ್ಷೇಪಾರ್ಹ. ಇದನ್ನು ಸಂತ್ರಸ್ತರಿಗೆ ಸಾಂತ್ವಾನ ತುಂಬಲು ಬಳಸಿಕೊಳ್ಳಬೇಕಿತ್ತು. ಸರಕಾರದಿಂದ 50 ಲಕ್ಷ ರೂ. ಬಿಡುಗಡೆಯಾಗಿದ್ದರೂ ಕೂಡ ಅನುದಾನ ಬಿಡುಗಡೆಯಾಗದಿರುವುದು ಖಂಡನೀಯ ಎಂದರು. ಗೋಷ್ಠಿಯಲ್ಲಿ ಕವಿಗೋಷ್ಠಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್.ನಾಸೀರ್, ಪದಾಧಿಕಾರಿಗಳಾದ ವಿಘ್ನೇಶ್ ಭೂತನಕಾಡು, ಕಿಶೋರ್ ರೈ ಕತ್ತಲೆಕಾಡು, ಮನು ಮುಂತಾದವರು ಉಪಸ್ಥಿತರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *