ಪರಿಸರ ಸಂರಕ್ಷಣೆ ಅಗತ್ಯ, ನಿರ್ಬಂಧಗಳಿಗೆ ಮಿತಿ ಇರಲಿ ಮಾಚಿಮಾಡ ರಾಜ ಉತ್ತಪ್ಪ

Posted on: October 16, 2018

mohan.oct14-3

 ಮಡಿಕೇರಿ : ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿಯೂ ಅತ್ಯವಶ್ಯಕವಾಗಿ ನಡೆಯಬೇಕಾಗಿರುವುದರಿಂದ ಪಶ್ಚಿಮ ಘಟ್ಟದ ಕುರಿತ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವುದು ಉತ್ತಮವೆಂದು ಕಾಪ್ಸ್ ವಿದ್ಯಾಸಂಸ್ಥೆಯ ಟ್ರಸ್ಟಿ ಮಾಚಿಮಾಡ ರಾಜ ತಿಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಪತ್ರಿಕಾ ಭವನದ 17ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಕೃತಿ ವಿಕೋಪ “ಪರಿಸರ ಸೂಕ್ಮ ವಲಯ – ಮುಂದಿನ ಹೆಜ್ಜೆಗಳು ಎಂಬ ವಿಷಯದ ಕುರಿತು ಮಾತನಾಡಿದ ಅವರು ಕಳೆದ 7-8 ವರ್ಷಗಳಿಂದ ಪರಿಸರ ಸಂರಕ್ಷಣೆಯ ಕುರಿತು ಸಲಹೆ ನೀಡುವಲ್ಲಿ ಕೊಡಗು ಪತ್ರಿಕಾ ಮಾಧ್ಯಮದವರು ಜವಬ್ದಾರಿಯುತ್ತವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಅನಗತ್ಯ ಚರ್ಚೆ ಮಾಡುವುದು ಅರ್ಥಹಿನ, ಪಶ್ಚಿಮ ಘಟ್ಟದಲ್ಲಿ ಅಭೀವೃದ್ಧಿಯೇ ಬೇಡವೆನ್ನುವ ವಾದ ಮಾಡಲು ಒಂದು ಮಿತಿ ಇದೇ ಎಂದರು. ಜಾಗತೀಕರಣದ ಪ್ರಭವಾದಿಂದ ವಿಶ್ವದ ಯಾವುದೇ ರಾಷ್ಟ್ರ ತಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇಂತಹ ಜಾಗತೀಕರಣದ ಮೂಲಕ ವಿಶ್ವ ಮಾರುಕಟ್ಟೆಯನ್ನು ಪ್ರವೇಶಿಸಿ ಅಭಿವೃದ್ಧಿಯನ್ನು, ಆರ್ಥಿಕ ಪ್ರಗತಿಯನ್ನು ಕಾಣಬೇಕಾದರೆ, ವಿಶ್ವ ಮಾರುಕಟ್ಟೆಯ ಹೆಬ್ಬಾಗಿಲೆಂದೇ ಪರಿಗಣಿಸುವ ಬಂದರುಗಳಿಗೆ ಯಾವುದೇ ಪ್ರದೇಶದಿಂದ ಸುಲಲಿತ ಸಂಪರ್ಕ ಅವಶ್ಯಕ.

ಪ್ರಸ್ತುತ ಭಾರತದ ಪಶ್ಚಿಮ ಕರಾವಳಿಯ ಬಂದರುಗಳು ಮತ್ತು ದಕ್ಷಿಣ ಭಾರತದ ಪ್ರದೇಶಗಳ ನಡುವೆ ಪಶ್ಚಿಮ ಘಟ್ಟವಿದ್ದು, ಒಂದಷ್ಟು ಅರಣ್ಯ ನಾಶವಾದರು ಇದರ ಮೂಲಕ ಬಂದರುಗಳನ್ನು ಸಂಪರ್ಕಿಸುವ ರಸ್ತೆಗಳು ಆಗಲೇಬೇಕು, ವಿದ್ಯುತ್, ಗ್ಯಾಸ್ ಪೈಪ್ ಲೈನ್‍ಗಳ ಮಾರ್ಗಗಳನ್ನು ಮಾಡಲೇಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದರು.
ಮರಗಳನ್ನು ಕಡಿಯಬಾರದೆನ್ನುವುದು ನಿಜಾವಾಗಿಯು ಸರಿಯೇ ಎಂದ ತಿಮ್ಮಯ್ಯ ಒಂದು ಮರವನ್ನು ಕಡಿದರೆ ಹತ್ತು ಮರಗಳನ್ನು ಬೆಳೆಸಬೇಕೆನ್ನುವುದು ಹೊರತು ಕಡಿಯಲೇ ಬಾರದೆನ್ನುವುದು ಸಂಮಜಸವಲ್ಲವೇಂದು ತಿಳಿಸಿದರು.

ಸುಳ್ಳು ಸುದ್ದಿಗಳನ್ನು ಹರಡುವ ಮಂದಿ ದಕ್ಷಿಣ ಕೊಡಗಿನ ಮೂಲಕ ಹಾದುಹೋದ ಹೈಟೆನ್ಸನ್ ವಿದ್ಯುತ್ ಮಾರ್ಗದಿಂದ 55 ಸಾವಿರ ಮರಗಳಹನನವಾಯಿತೆನ್ನುವ ಸುಳ್ಳನ್ನು ಹರಡಲಾಗಿದೆ. ಆದರೆ ರಚಿತವಾದ 55 ಕಿ.ಮೀ ವಿದ್ಯುತ್ ಮಾರ್ಗದಲ್ಲಿ 44 ಕಿ.ಮೀ ಗದ್ದೆ ಬಯಲಿನಲ್ಲಿ ಸಾಗಿದರೆ,5ಕಿ.ಮೀ ಕಾಫಿ ತೋಟ ಮತ್ತು 6 ಕಿ.ಮೀ ಅರಣ್ಯ ಪ್ರದೇಶದಲ್ಲಿ ಹಾದುಹೋಗಿದ್ದು ಇದಕ್ಕಾಗಿ ಹೆಚ್ಚೆಂದರೆ 5 ರಿಂದ 6 ಸಾವಿರ ಮರಗಳನ್ನು ಕಡಿದಿರಬಹುದು ಆದರೆ ಅದನ್ನು ಮಾರೆಮಾಚಿ ಉಹಾಪೋಹಗಳನ್ನು ಹರಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತ್ಯೇಕ ನಿರ್ಬಂಧವೇತಕ್ಕೆ ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಯಾಗಬೇಕು ಎನ್ನುವ ಕಾರಣವೋದಕ್ಕೆ ಸೀಮಿತವಾಗಿ ಈ ಭಾಗಕ್ಕೆ ಪ್ರತ್ಯೇಕ ಕಾನೂನು, ನಿರ್ಬಂಧಗಳು ಯಾಕೆಂದು ಪ್ರಶ್ನಿಸಿದ ಅವರು ಹಿಂದಿನ ಗಾಡ್ಗಿಲ ವರದಿಯಲ್ಲಿ ಪಶ್ಚಿಮ ಘಟ್ಟದ ಪರಿಸರದ ವಿವರಗಳಿದೆಯೇ ಹೊರತು ಮನುಷ್ಯನ ವಾಸದ ಬಗ್ಗೆ ಮಾಹಿತಿಗಳೇ ಇಲ್ಲ. ಬಳಿಕ ಬಂದ ಕಸ್ತೂರಿ ರಂಗನ್ ವರದಿಯಲ್ಲಿ ಜನಜೀವನದ ನಿತ್ಯದ ಬದುಕಿಗೆ ಅತ್ಯವಶ್ಯವಾದ ರಸ್ತೆ,ವಿದ್ಯುಚ್ಛಕ್ತಿ ಮಾರ್ಗಗಳಿಗೆ ನಿರ್ಬಂಧದೊಂದಿಗೆ ಅಭಿವೃದ್ಧಿಯೇ ಬೇಡ ಎನ್ನುವ ಸಿದ್ದಾಂತ ಎಷ್ಟು ಸರಿಯೆಂದು ಪ್ರಶ್ನಿಸದರು.

ದೇಶದ ಒಟ್ಟು ಜನಸಂಖ್ಯೆಯ ಶೇ.4 ರಷ್ಟು ಪಶ್ಚಿಮ ಘಟ್ಟದಲ್ಲಿ ನೆಲೆಸಿದ್ದು ದೇಸದ ವಿಸ್ತೀರ್ಣದ ಶೇ.4 ರಷ್ಟು ವಿಸ್ತೀರ್ಣವನ್ನು ಹೊಂದಿದ್ದು ಇತರೆಡೆಗಳಂತೆ ಇಲ್ಲಿಯೂ ಜನಜೀವನವಿರುವಾಗ ಅಭಿವೃದ್ಧಿ ಬೇಡವೆನ್ನುವುದನ್ನು ಬಿಟ್ಟು ಪರಿಹಾರ ಕಂಡುಕೊಳ್ಳುವುದು ಉತ್ತಮವೆಂದು ಹೇಳಿದರು.

ಕೆಪಿಸಿಎಲ್ ಮಾಜಿ ನಿರ್ದೇಶಕ, ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್‍ಮೆನ್ ಎಂ.ಬಿ.ಜಯರಾಂ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಪತ್ರಿಕಾ ಭವನ ಟ್ರಸ್ಟಿ ಬಿ.ಎನ್ ಮನು ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಧಾನಕಾರ್ಯದರ್ಶಿ ಉಮೇಶ್ ಸ್ವಾಗತಿಸಿದರು, ಖಜಾಂಚಿ ಕೇಶವಕಾಮತ್ ನಿರೂಪಿಸಿ ವಂದಿಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *