ಪುನರ್ ವಸತಿ ನೀಲ ನಕಾಶೆ ಶ್ವೇತಪತ್ರ ಬಿಡುಗಡೆಗೆ ಸಿಎನ್‌ಸಿ ಆಗ್ರಹ

Posted on: October 8, 2018

mohan.kpv15

ಮಡಿಕೇರಿ : ವಾಯವ್ಯ ಕೊಡಗಿನ ಹಾರಂಗಿ ಜಲಾನಯನ ಪ್ರದೇಶದ 7 ಕೊಡವ ನಾಡುಗಳಲ್ಲಿ ಆಗಸ್ಟ್ 12 ರಿಂದ 19 ರವರೆಗೆ ಉಂಟಾದ ಭಿಕರ ಜಲ ಸ್ಪೋಟದಿಂದ ಸಂಭವಿಸಿದ ಭೂ ಕುಸಿತ ದುರಂತಕ್ಕೆ ಒಳಗಾಗಿರುವ ಸಂತ್ರಸ್ತರ ಶಾಶ್ವತ ಪುನರ್ ವಸತಿಗಾಗಿ ಹಾಗೂ ಇದೊಂದು ರಾಷ್ರ್ಟೀಯ ಮತ್ತು ಅಂತರರಾಷ್ರ್ಟೀಯ ವಿಪತ್ತೆಂದು ಘೋಷಿಸುವುದರೊಂದಿಗೆ ಈ ಕುರಿತು ವ್ಯಯಿಸಲಾಗಿರುವ ಹಣ ಮತ್ತು ಸಂಗ್ರಹವಾದ ದೇಣೀಗೆ ಕುರಿತು ಸಮಗ್ರ ಶ್ವೇತ ಪತ್ರ ಮತ್ತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣದ ನೀಲಿನಕ್ಷೆ ಬಹಿರಂಗಕ್ಕೆ ಸಿಎನ್‍ಸಿ ಒತ್ತಾಯಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಎರಡು ತಿಂಗಳ ಹಿಂದೆ ವಾಯವ್ಯ ಕೊಡಗಿನ ಜಲಾಯನ ಪ್ರದೇಶದ 3 ಜಿಲ್ಲಾಪಂಚಾಯಿತಿ ವ್ಯಾಪ್ತಿಯ ಕೊಡಗಿನ 12% ಭೂಭಾಗದ ಮದೆನಾಡು, ಜೋಡುಪಾಲದಿಂದ ಮಾದಾಪುರದ ಸೂರ್ಲಬ್ಬಿ ನಾಡವರೆಗೆ ಹಬ್ಬಿರುವ ಏಳು ನಾಡುಗಳಲ್ಲಿ ಸಂಭವಿಸಿದ ಭೀಕರ ಜಲ ಸ್ಪೋಟ, ಭೂಕುಸಿತದಿಂದ ಉಂಟಾದ ದುರಂತದಲ್ಲಿ ಬೀದಿಪಾಲಾದ ಸಂತ್ರಸ್ತರ ಬದುಕು ಇಂದಿಗೂ ಅತಂತ್ರವಾಗಿಯೇ ಮುಂದುವರೆದಿದ್ದು, ಅವರ ಅಂಧಕಾರದ ಬದುಕಿಗೆ ಬೆಳಕು ನೀಡುವ ಯೋಜನೆಯ ಸ್ಪಷ್ಟಚಿತ್ರಣವಿಲ್ಲದೆ, ಡೋಲಾಯಮಾನ ಸ್ಥಿತಿಯಿಂದ ಶೂನ್ಯದೆಡೆಡಗಡ ತಲುಪಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಪುನರ್ ವಸತಿಯನ್ನು ಅವರುಗಳು ಸಾವಿರಾರು ವರ್ಷಗಳಿಂದ ಜನಪದೀಯವಾಗಿ ಬೆಳೆದು ಬಂದ ಅದೇ ಸ್ಥಳದಲ್ಲಿ ಪುನರ್ ಕಲ್ಪಿಸಬೇಕೇಂದು ಈ ದುರಂತವನ್ನು ರಾಷ್ರ್ಟೀಯ ವಿಪತ್ತೆಂದು ಘೋಷಿಸಿ . ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಶಾಶನಬದ್ಧವಾಗಿ ಲಭ್ಯವಿರುವ ಯಥೇಚ್ಛ ಸವಲತ್ತು ದೊರಕಬೇಕೆಂದು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಇಲ್ಲಿಯತನಕ ವಿನಿಯೋಗಿಸಿದ ಹಣ, ಸಾರ್ವಜನಿಕರಿಂದ, ವಿಶಾಲಾ ಹೃದಯಿ ದಾನಿಗಳಿಂದ ಮತ್ತು ವಿವಿಧೆಡೆಗಳಿಂದ ಹರಿದುಬಂದ ದೇಣಿಗೆ ಹಣದ ಮೂಲ ಮತ್ತು ವ್ಯಯದ ಕುರಿತು ಶ್ವೇತ ಪತ್ರ ಹೊರಡಿಸಬೆಕು ಯಾಕೆಂದರೇ ವಿಪತು ನಡೆದು 2 ತಿಂಗಳೆ ಕಳೆದರೂ ಸರಕಾರ ಆರ್ಥಿಕ ಸ್ಥಿತಿ ಕುಸಿದು ದಿವಾಳಿಯಾದ ರೀತಿ ಸೋಗು ಹಾಕುತ್ತಿದ್ದು, ಸಂತ್ರಸ್ತರಿಗೆ ಕನಿಷ್ಟ 5 ಸಾವಿರ ಕೋಟಿ ರೂಗಳಷ್ಟು ಹಣ ಮತ್ತು ಆಹಾರ ಸಾಮಾಗ್ರಿಗಳು ಹರಿದುಬಂದಿದೆ. ಇದರ ಸಂಪೂರ್ಣ ಮಾಹಿತಿಯನ್ನು ಶ್ವೇತ ಪತ್ರದ ಮೂಲಕ ಪ್ರಕಟಿಸಬೇಕು ಮತ್ತು ಪುನರ್ ನಿರ್ಮಾಣ ಕಾರ್ಐದ ರೂಪುರೇಶೆಯ ನೀಲಿನಕ್ಷೆಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದು, ಇದರ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಅಕ್ಟೋಬರ್ 10 ರಂದು ನಗರದ ಗಾಂಧಿ ಮೈದಾನದಲ್ಲಿ 10 ಗಂಟೆಯಿಂದ ಮರುದಿನ 10 ಗಂಟೆಯ ವರೆಗೆ 24 ಗಂಟೆಗಳ ಆಹೋರಾತ್ರಿ ಹೋರಾಟವನ್ನು ನಡೆಸುದಾಗಿ ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *