ಬಸ್ ಡಿಕ್ಕಿ ಗಾಯಗೊಂಡಿದ್ದ ಸಾಕಾನೆ ರೌಡಿ ರಂಗ ಸಾವು

Posted on: October 8, 2018

 

absolute-black-1   

ಮಡಿಕೇರಿ: ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆಕ್ಯಾಂಪ್ ಬಳಿ ಕಣ್ಣನ್ನೂರಿನಿಂದ ಬೆಂಗಳೂರಿಗೆ ಹೋಗುತಿದ್ದ ಕಲ್ಪಕ ಬಸ್ ಸಾಕಾನೆಯೊಂದಕ್ಕೆ ಡಿಕ್ಕಿ ಹೊಡೆದ ಕಾರಣ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಾವನ್ನಪ್ಪಿದೆ.

ಮತ್ತಿಗೋಡು ಆನೆಕ್ಯಾಂಪ್ ನಲ್ಲಿರುವ 45 ವರ್ಷದ ಆನೆ ರಂಗನನ್ನು ಎಂದಿನಂತೆ ರಾತ್ರೆ ತಿರುಗಾಡಲು ಬಿಡಲಾಗಿತ್ತು. ರಾತ್ರಿ ಅಂದಾಜು 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಆನೆಕ್ಯಾಂಪ್ ನ ವೈದ್ಯ ಡಾ ಮುಜೀಬ್ ಮತ್ತು ಆನೆ ಮಾವುತರು ಆನೆಗಳ ಸಹಕಾರದಿಂದ ಶುಶ್ರೂಷೆ ನಡೆಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇದೀಗ ಆನೆ ಸಾವನ್ನಪ್ಪಿದೆ.

ಈ ಆನೆಯನ್ಬು ಬೆಂಗಳೂರಿನ ಬಳಿಯಲ್ಲಿ 3 ವರ್ಷಗಳ ಹಿಂದೆ ಸೆರೆಹಿಡಿದು ಪಳಗಿಸಲಾಗಿತ್ತು. ರೌಡಿ ರಂಗ ಎಂದು ಈ ಆನೆ ಹಿಂದೆ ಪ್ರಖ್ಯಾತಿ ಪಡೆದಿತ್ತು.

02-1

WhatsApp Image 2018-10-08 at 3.09.46 PM

WhatsApp Image 2018-10-08 at 3.09.41 PM

WhatsApp Image 2018-10-08 at 3.09.32 PM

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *