ಮಡಿಕೇರಿ ದಸರಾ ಸಾಂಪ್ರದಾಯಿಕ ಆಚರಣೆಗೆ ನಿರ್ಧಾರ – ಮಡಿಕೇರಿಗೆ 50 ಲಕ್ಷ ಗೋಣಿಕೊಪ್ಪಕ್ಕೆ 25 ಲಕ್ಷ ಅನುದಾನ ಘೋಷಣೆ

Posted on: October 8, 2018

31-2

ಮಡಿಕೇರಿ : ಸಾಂಪ್ರದಾಯಕ ಮತ್ತು ಸರಳ ರೀತಿಯಲ್ಲಿ ದಸರಾ ಉತ್ಸವ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಅವರು ಹೇಳಿದರು.
ಅಕ್ಟೋಬರ್ ಮಾಹೆಯಲ್ಲಿ ಜರುಗುವ ಮಡಿಕೇರಿ ದಸರಾ ಆಚರಣೆಯ ಪೂರ್ವ ಸಿದ್ದತೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಗರದ ನಗರಸಭೆಯ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ದಸರಾ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.

ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಅಪಾರ ಹಾನಿ ಉಂಟಾಗಿದ್ದು, ಜನರು ಸಂತ್ರಸ್ತರಾಗಿದ್ದಾರೆ ಇಂತಹ ಸಂದರ್ಭದಲ್ಲಿ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಬದಲು ಸಾಂಪ್ರದಾಯಕವಾಗಿ ಮತ್ತು ಸರಳ ರೀತಿಯಲ್ಲಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಭಾರಿಯ ದಸರಾ ಉತ್ಸವಕ್ಕೆ ಸರ್ಕಾರವು ಅನುದಾನ ನೀಡಲಿದ್ದು, ಗೋಣಿಕೊಪ್ಪ ದಸರಾ ಉತ್ಸವಕ್ಕೆ 25 ಲಕ್ಷ ಹಾಗೂ ಮಡಿಕೇರಿ ದಸರಾ ಉತ್ಸವಕ್ಕೆ 50 ಲಕ್ಷ ಅನುದಾನ ಬಿಡುಗಡೆ ಮಾಡಲಿದೆ ಎಂದು ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಅವರು ತಿಳಿಸಿದರು.

ಸಭೆ ಆರಂಭದಲ್ಲಿ ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷರಾದ ಮಹೇಶ್ ಜೈನ್ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆ ತತ್ತರಿಸಿದ್ದು, ಇಂತಹ ಸಂದರ್ಭದಲ್ಲಿ ಜನರ ಬಳಿ ಹೋಗಿ ಚಂದಾ ವಸೂಲಿ ಮಾಡದೆ ಸರ್ಕಾರ ನೀಡುವ ಅನುದಾನದಿಂದ ದಸರಾ ಉತ್ಸವವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಿಸಲಾಗುವುದು ಆದ್ದರಿಂದ ಸರ್ಕಾರ ಈ ಭಾರಿ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಸಚಿವರಲ್ಲಿ ಮನವಿಯನ್ನು ಮಾಡಿದರು.

ದಶ ಮಂಟಪ ಸಮಿತಿ ಅಧ್ಯಕ್ಷರಾದ ರವಿಕುಮಾರ್ ಅವರು ಮಾತನಾಡಿ ದಸರಾ ಉತ್ಸವದಲ್ಲಿ 4 ಶಕ್ತಿ ದೇವತೆಗಳ ಆರಾಧನೆ ಮುಖ್ಯವಾಗಿದ್ದು, ಇದೇ 10 ರಿಂದ ನಾಲ್ಕು ಶಕ್ತಿ ದೇವತೆಗಳು ನಗರ ಪ್ರದಕ್ಷಣೆ ಮಾಡಲಿವೆ. ಪತ್ರಿವರ್ಷದಂತೆ ಈ ಭಾರಿ ದಸರಾ ಉತ್ಸವವನ್ನು ಸಾಂಪ್ರದಾಯಕವಾಗಿ ಆಚರಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಹಾಗೂ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಮನ್ ಡಿ.ಪೆನ್ನೇಕರ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ದಸರಾ ಸಮಿತಿಯ ಸದಸ್ಯರು, ದಶ ಮಂಟಪ ಸಮಿತಿ ಸದಸ್ಯರು, ಇತರರು ಇದ್ದರು.

32-2

DSC07111

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *